ಸುಳ್ಯ, ಕಡಬ ಹಾಗು ಬೆಳ್ತಂಗಡಿ ಪ್ರದೇಶಗಳಲ್ಲಿ ಕಾಡಾನೆ ದಾಳಿಗಳು ದಿನೇ ದಿನೇ ಹೆಚ್ಚುತ್ತಿದ್ದು, ಸ್ಥಳೀಯ ಕೃಷಿಕರು ಆತಂಕದ ಜೀವನ ನಡೆಸುತ್ತಿದ್ದಾರೆ. ಈ ಸಮಸ್ಯೆ ಕುರಿತು ಇಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಭಾರತೀಯ ಕಿಸಾನ್ ಮಜ್ದೂರ್ ಸಂಘದ ನಿಯೋಗದೊಂದಿಗೆ ಅರಣ್ಯ ಸಚಿವರಾದ ಶ್ರೀ...
Read More
ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯ ರಚನೆ
ಬೆಂಗಳೂರು: ಗಣಿ ಅಕ್ರಮ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಸರ್ಕಾರಕ್ಕಾಗಿರುವ ನಷ್ಟ ವಸೂಲಿಗೆ ವಸೂಲಿ ಆಯುಕ್ತರ ನೇಮಕ ಹಾಗೂ ಪ್ರಕರಣಗಳ ವಿಚಾರಣೆ ನಡೆಸಿ, ಶೀಘ್ರ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯ ರಚನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಕ್ರಮ...
Read More
218 ಮಂದಿ ಸರ್ಕಾರಿ ನೌಕರರ ಮೇಲೆ ಲೋಕಾಯುಕ್ತ ದಾಳಿ: ಓರ್ವ ಸರ್ಕಾರಿ ನೌಕರ ಸಹ ತಪ್ಪಿತಸ್ಥ ಎಂದು ಕಂಡುಬಂದಿಲ್ಲ ರಾಜ್ಯ ಸರ್ಕಾರ ತಿಳಿಸಿದೆ.
ಬೆಂಗಳೂರು: ಭ್ರಷ್ಟಾಚಾರ ವಿರುದ್ಧ ಸಮರ ಸಾರುವ ಲೋಕಾಯುಕ್ತ ಸಂಸ್ಥೆಯು ಕಳೆದ ಎರಡು ವರ್ಷಗಳಲ್ಲಿ 218 ದಾಳಿ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಈವರೆಗಿನ ತನಿಖೆಯಲ್ಲಿ ಓರ್ವ ಸರ್ಕಾರಿ ನೌಕರ ಸಹ ತಪ್ಪಿತಸ್ಥ ಎಂದು ಕಂಡುಬಂದಿಲ್ಲ ರಾಜ್ಯ ಸರ್ಕಾರ ತಿಳಿಸಿದೆ. ಕಂದಾಯ, ಲೋಕೋಪಯೋಗಿ, ನಗರಾಭಿವೃದ್ಧಿ, ಇಂಧನ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ...
Read More
ಉದ್ಯಮಿಯೊಬ್ಬರನ್ನ ಕಸ್ಟಮ್ಸ್ ಅಧಿಕಾರಿಗಳೆಂದು ಅಪಹರಿಸಿ 35 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿದ್ದ ಐವರು ಬಂಧನ
ಮಂಗಳೂರು: ಇಲ್ಲಿನ ಸೆಂಟ್ರಲ್ ರೈಲ್ವೆ ನಿಲ್ದಾಣ ಸಮೀಪದ ಕೈರಾಲಿ ಹೋಟೆಲ್ ಬಳಿ ಆಟೋ ಕಾಯುತ್ತಿದ್ದ ಉದ್ಯಮಿಯೊಬ್ಬರನ್ನ ಕಸ್ಟಮ್ಸ್ ಅಧಿಕಾರಿಗಳೆಂದು ಸುಳ್ಳು ಹೇಳಿ ಅಪಹರಿಸಿ ಅವರ ಬಳಿ ಇದ್ದ 35 ಲಕ್ಷ ರೂ. ಮೌಲ್ಯದ ಶುದ್ಧ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಮಂಗಳೂರು ಪೊಲೀಸರು ಮಹಾರಾಷ್ಟ್ರದ...
Read More
ಹೆಬ್ರಿ ತಾಲೂಕಿನ ಚಾರದಲ್ಲಿ ಅಪಾರ ಪ್ರಾಕೃತಿಕ ವಿಕೋಪ
ಹೆಬ್ರಿ: ಹೆಬ್ರಿ ತಾಲೂಕಿನ ಚಾರದಲ್ಲಿ ಅಪಾರ ಪ್ರಾಕೃತಿಕ ವಿಕೋಪ ಸಂಭವಿಸಿದೆ. ಸುಮಾರು 1500 ರಷ್ಟು ಮರಗಳು ಗಾಳಿಗೆ ಕೆಳಕ್ಕೆ ಬಿದ್ದಿರುವುದಾಗಿ ತಿಳಿದು ಬಂದಿದೆ. 19 ಮನೆಗಳು, 9 ಕಡೆ ಕೃಷಿ ಪ್ರದೇಶ ಹಾನಿಗೀಡಾಗಿದೆ.ಗಾಳಿ ಯಾವ ಮಟ್ಟಕ್ಕೆ ಇತ್ತು ಎಂದರೆ ಹಂಚು, ತಗಡು ಶೀಟು ಇವೆಲ್ಲವೂ ಹಾರಿ ಹೋಗಿದೆ....
Read More
ಬಿಜೆಪಿ ಮುಖಂಡನ ಮಗನ ಲವ್ ಸೆಕ್ಸ್ ಧೋಖಾ ಪ್ರಕರಣ ಹಿನ್ನೆಲೆ ಮೂವರ ಡಿಎನ್ಎ ಪರೀಕ್ಷೆಗೆ ರಕ್ತದ ಮಾದರಿ ಸಂಗ್ರಹ
ಪುತ್ತೂರು: ಬಿಜೆಪಿ ಮುಖಂಡನ ಮಗನ ಲವ್ ಸೆಕ್ಸ್ ಧೋಖಾ ಪ್ರಕರಣ. ಸಂತ್ರಸ್ತೆ ಯುವತಿಯೊಂದಿಗೆ ದೈಹಿಕ ಸಂಪರ್ಕ ಮಗುವಿನ ಜನ್ಮಕ್ಕೆ ಕಾರಣನಾಗಿದ್ದ ಆರೋಪಿಯ ರಕ್ತದ ಮಾದರಿ ಸಂಗ್ರಹಿಸುವ ಪ್ರಕ್ರಿಯೆ ನಡೆದಿದೆ. ಆರೋಪಿ ಶ್ರೀಕೃಷ್ಣ ಜೆ.ರಾವ್, ಸಂತ್ರಸ್ತೆ ಮತ್ತು ಮಗು ಈ ಮೂವರ ಡಿಎನ್ಎ ಪರೀಕ್ಷೆಗೆ ನ್ಯಾಯಾಧೀಶದ ಮುಂದೆಯೇ ನಡೆದ...
Read More
ಕೆಲಸವಿಲ್ಲದೇ ಕಳ್ಳತನಕ್ಕೆ ಇಳಿದ ಯುವಕನ ಬಂಧನ
ಪುತ್ತೂರು: ಕೆಲಸ ಇಲ್ಲದೆ ಕಂಗಲಾಗಿದ್ದ ಯುವಕ ಕಳ್ಳತನಕ್ಕೆ ಇಳಿದು ಚಿನ್ನ ಮತ್ತು ಹಣ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಪುತ್ತೂರಿನ ಈಶ್ವರಮಂಗಲದಲ್ಲಿ ನಡೆದಿದೆ. ಕಳೆದ 5 ದಿನಗಳ ಹಿಂದೆ ಈಶ್ವರಮಂಗಲ ಪೇಟೆಯ ನಿವಾಸಿ ಶೋಭಾ ಕೃಷ್ಣರಾಯ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ...
Read More
ಸರ್ವ ಧರ್ಮಗಳನ್ನೂ ಗೌರವಿಸುತ್ತಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ವಿವಾದದ ಮಧ್ಯೆ ಎಳೆದು ತರುವುದು ತಪ್ಪು – ಬಿಜೆಪಿ
ಪುತ್ತೂರು: ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಪುತ್ತೂರಿನ ಕಾಂಗ್ರೆಸ್ ಮುಖಂಡ ಎಚ್. ಮಹಮ್ಮದ್ ಆಲಿ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಉಲ್ಲೇಖಿಸಿ ಅವಮಾನಕರ ರೀತಿಯ ಮಾತುಗಳನ್ನಾಡಿದ್ದಾರೆ. ಇದು ಖಂಡನೀಯ. ಸರ್ವ ಧರ್ಮಗಳನ್ನೂ ಗೌರವಿಸುತ್ತಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ವಿವಾದದ...
Read More
ಸವಣೂರು ಪರಿಸರದಲ್ಲಿ ರಣ ಭೀಕರ ಬಿರುಗಾಳಿ – ಅಡಿಕೆ ತೋಟ, ವಿದ್ಯುತ್ ಕಂಬಗಳಿಗೆ ಹಾನಿ
ಸವಣೂರು: ಕಡಬ ತಾಲೂಕಿನ ಸವಣೂರು ಪರಿಸರದಲ್ಲಿ ಆ.19ರಂದು ಮುಂಜಾನೆ 5 ಗಂಟೆಗೆ ಬೀಸಿದ ಭೀಕರ ಗಾಳಿಯಿಂದಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಸವಣೂರು ಮೆಸ್ಕಾಂ ಉಪವಿಭಾಗದ ಸವಣೂರು ಗ್ರಾಮದ ಕೆಡೆಂಜಿ, ಆರೇಲ್ತಡಿ, ಕುದ್ಮನಮಜಲು ಪಟ್ಟೆ ಮಡಕೆ, ಕುದ್ಮಾರು ಗ್ರಾಮದ ಅನ್ಯಾಡಿ ಪರಿಸರದಲ್ಲಿ ಮರ ಬಿದ್ದು ಸುಮಾರು ವಿದ್ಯುತ್...
Read More
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರು ಬಿಜೆಪಿಯಿಂದ ಪುತ್ತೂರು ನಗರ ಠಾಣಾ ಪೊಲೀಸರಿಗೆ ದೂರು
ಪುತ್ತೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್‌ರವರಿಗೆ ಏಕವಚನದಲ್ಲಿ ಮಾತನಾಡಿರುವುದಲ್ಲದೆ ಹೆಣ್ಣು ಮಕ್ಕಳ ಬಗ್ಗೆ ಅವಮಾನ ರೀತಿಯಲ್ಲಿ ಮಾತನಾಡಿ ಗುಂಪು ಘರ್ಷಣೆಗೆ ಪ್ರಚೋದನೆ ನೀಡಿರುವ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರು ಬಿಜೆಪಿಯಿಂದ ಪುತ್ತೂರು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಮಹೇಶ್ ತಿಮರೊಡ್ಡಿಯವರು...
Read More

