

ಪುತ್ತೂರು: ಕೆಲಸ ಇಲ್ಲದೆ ಕಂಗಲಾಗಿದ್ದ ಯುವಕ ಕಳ್ಳತನಕ್ಕೆ ಇಳಿದು ಚಿನ್ನ ಮತ್ತು ಹಣ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಪುತ್ತೂರಿನ ಈಶ್ವರಮಂಗಲದಲ್ಲಿ ನಡೆದಿದೆ.
ಕಳೆದ 5 ದಿನಗಳ ಹಿಂದೆ ಈಶ್ವರಮಂಗಲ ಪೇಟೆಯ ನಿವಾಸಿ ಶೋಭಾ ಕೃಷ್ಣರಾಯ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಪಾಟಿನ ಬೀಗ ಮುರಿದು 31 ಗ್ರಾಂ ಚಿನ್ನ ಹಾಗೂ 5 ಸಾವಿರ ನಗದು ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕಳ್ಳತನ ಮಾಡಿರುವ ದೂರಿನಡಿ ನೆಟ್ಟಣಿಗೆ ಮುಡ್ನೂರು ಮುಂಡ್ಯ ನಿವಾಸಿ ದಯಾನಂದ ನಾಯ್ಕ ಎಂ(29) ಎಂಬತನನ್ನು ಪುತ್ತೂರು ಗ್ರಾಮಾಂತರ ಸಂಪ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೆಂಪು ಕಲ್ಲಿನ ಕೆಲಸವಿಲ್ಲದೆ ಕಂಗಾಲಾಗಿದ್ದ ಆರೋಪಿ ಕಳ್ಳತನಕ್ಕೆ ಇಳಿದಿದ್ದಾನೆ.
ಕೆಂಪು ಕಲ್ಲಿನ ಲೋಡಿಂಗ್ ಕೆಸಲ ಮಾಡುತ್ತಿದ್ದ ಈತ 3 ತಿಂಗಳಿನಿಂದ ಕೆಲಸವಿಲ್ಲದೇ ಕಂಗೆಟ್ಟಿದ್ದ.
ವಿವಿಧ ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿಕೊಂಡು ಸಾಲ ಹಿಂತಿರುಗಿಸಲಾಗದೇ ಕಳ್ಳತನಕ್ಕೆ ಮುಂದಾಗಿದ್ದಾನೆಂದು ಸಾರ್ವಜನಿಕರು ಮಾಹಿತಿ ಕೊಟ್ಟಿದ್ದಾರೆ.


