ಮಂಜೇಶ್ವರ: ಶೌಚಾಲಯದಲ್ಲಿ ಆರೋಗ್ಯ ಅಧಿಕಾರಿಯ ಮೃತದೇಹ ಪತ್ತೆ.

ಮಂಜೇಶ್ವರ: ಆರೋಗ್ಯ ಅಧಿಕಾರಿರೋರ್ವರು ವಾಸಸ್ಥಳದ ಶೌಚಾಲಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ,ಈ ಘಟನೆ ತಿಳಿದು ಬಂದಿದೆ.

ಮೃತ ದುರ್ದೈವಿಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಕುಟುಂಬ ಕಲ್ಯಾಣ ಕೇಂದ್ರದ ಆರೋಗ್ಯಾಧಿಕಾರಿ ಪತ್ತನಂತ್ತಿಟ್ಟ ಮನೋಜ್ (45) ಎಂದು ಗುರುತಿಸಲಾಗಿದೆ.  

ಮನೋಜ್ ಅವರು ಮಂಜೇಶ್ವರ ಎಸ್ಐಟಿ ಶಾಲಾ ಸಮೀಪದ ವಸತಿ ಗೃಹದಲ್ಲಿ ವಾಸವಾಗಿದ್ದರು. ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಪರಿಸರ ವಾಸಿಗಳು ಗಮನಿಸಿದಾಗ ಮನೋಜ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 

ಎರಡು ದಿನಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅವರು ಒಬ್ಬರು ಮಾತ್ರ ಈ ಕೊಠಡಿಯಲ್ಲಿದ್ದರು ಎಂದು ತಿಳಿದುಬಂದಿದೆ

ಎರಡು ತಿಂಗಳ ಹಿಂದೆ ಮಂಜೇಶ್ವರದಲ್ಲಿ ಅರೋಗ್ಯ ಅಧಿಕಾರಿಯಾಗಿ ಮನೋಜ್ ಅವರು ಅಧಿಕಾರ ವಹಿಸಿಕೊಂಡಿದ್ದರು. ಮಂಜೇಶ್ವರ ಠಾಣಾ ಪೊಲೀಸರು ಮಹಜರು ನಡೆಸಿದರು.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

News Editor

Learn More →

Leave a Reply

Your email address will not be published. Required fields are marked *