ಕಾರಿನಲ್ಲಿ ಮಗು ಮರೆತು ಕಾರಿನಲ್ಲಿ ಪ್ರಾಣಬಿಟ್ಟ 3 ವರ್ಷದ ಕಂದಮ್ಮ ಕರಳು ಚುರ್ ಅನ್ನೋ ಸುದ್ದಿ.

ಸಾಂದರ್ಭಿಕ ಚಿತ್ರ

ಕಾರಿನಲ್ಲಿ ಮಗು ಮರೆತು ಮದ್ವೆಗೆ ಹೋದ ಅಪ್ಪ-ಅಮ್ಮ; ನರಳಿ ನರಳಿ ಪ್ರಾಣಬಿಟ್ಟ 3 ವರ್ಷದ ಕಂದಮ್ಮ
ರಾಜಸ್ಥಾನದ ಕೋಟಾದಲ್ಲಿ ದಾರುಣ ಘಟನೆ ನಡೆದಿದ್ದು, ಮಕ್ಕಳ ಹೆತ್ತವರ ಕರಳು ಚುರ್ ಅನ್ನೋ ಸುದ್ದಿ ಇದಾಗಿದೆ. ಮೂರು ವರ್ಷದ ಮಗುವನ್ನು ಕಳೆದುಕೊಂಡು ಪೋಷಕರು ಕಣ್ಣೀರಲ್ಲಿ ಮುಳುಗಿದ್ದಾರೆ.
ಜೋರಾವರಪುರದಲ್ಲಿ ಪ್ರದೀಪ್ ಅನ್ನೋರು ವಾಸವಿದ್ದಾರೆ. ಪ್ರದೀಪ್ ದಂಪತಿಗೆ ಇಬ್ಬರು ಮುದ್ದಾದ ಹೆಣ್ಮಕ್ಕಳಿದ್ದರು. ಇತ್ತೀಚೆಗೆ ಈ ದಂಪತಿ ತಮ್ಮ ಮಕ್ಕಳ ಜೊತೆ ಸಂಬಂಧಿಕರ ಮದುವೆ ತೆರಳಿತ್ತು. ಮದುವೆ ನಡೆಯುತ್ತಿದ್ದ ಸ್ಥಳ ಬರುತ್ತಿದ್ದಂತೆಯೇ, ಸಂಬಂಧಿಕರು ಎದುರಾದರು. ಹೀಗಾಗಿ ಪ್ರದೀಪ್ ಕಾರನ್ನು ನಿಲ್ಲಿಸಿದ್ದರು.
ಆಗ ಕಾರಿನಿಂದ ಪ್ರದೀಪ್ ಪತ್ನಿ ಮತ್ತು ಹಿರಿಯ ಮಗಳು ಇಳಿದಿದ್ದರು. ಇವರ ಕಿರಿಯ ಮಗಳು ಕಾರಿನ ಹಿಂದಿನ ಸೀಟಿನಲ್ಲಿ ನಿದ್ರೆಗೆ ಜಾರಿತ್ತು. ಇದು ಪ್ರದೀಪ್ ಗಮನಕ್ಕೆ ಬಂದಿರಲಿಲ್ಲ. ನಂತರ ಪ್ರದೀಪ್ ತಮ್ಮ ಕಾರನ್ನು ಪಾರ್ಕಿಂಗ್​ಗೆ ಹೋಗಿ ಪಾರ್ಕ್ ಮಾಡಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.





ಬರೋಬ್ಬರಿ 2 ಗಂಟೆಗಳ ಕಾಲ ಮದುವೆ ಮನೆಯಲ್ಲಿ ಸುತ್ತಾಟ ನಡೆಸಿದ್ದಾರೆ. ಸಂಬಂಧಿಕರ ಜೊತೆ ಮಾತನಾಡಿ ಮಜಾ ಮಾಡಿದ್ದಾರೆ. ಕೊನೆಗೆ ಮಗಳು ನೆನಪಾಗಿದೆ. ಎಲ್ಲಿ ಎಂದು ಹುಡುಕಾಟ ನಡೆಸಿದ್ದಾರೆ. ಇಡೀ ಮದುವೆ ಮನೆಯಲ್ಲಿ ಶೋಧ ನಡೆಸಿದ್ದಾರೆ. ಕೊನೆಗೆ ಕಾರು ಪಾರ್ಕ್ ಮಾಡಿದ್ದ ಸ್ಥಳಕ್ಕೆ ಬಂದಿದ್ದಾರೆ. ಕಾರಿನ ಒಳಗೆ ನೋಡಿದಾಗ ಮೂರು ವರ್ಷದ ಮಗು ಗೌರವಿಕಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಮೃತಪಟ್ಟಿದ್ದಾಳೆ ಎಂದು ಘೋಷಣೆ ಮಾಡಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಕೆಸ್ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

News Editor

Learn More →

Leave a Reply

Your email address will not be published. Required fields are marked *