2 ಸಾವಿರ ರೂ.ವರೆಗಿನ UPI ಪಾವತಿಗಳಿಗೆ ಯಾವುದೇ ಶುಲ್ಕವಿಲ್ಲ: ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರದ

ನವದೆಹಲಿ: ಸಣ್ಣ ಪ್ರಮಾಣದ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ಸೇವೆಗಳ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳು ಹಾಗೂ ರೂಪೇ ಡೆಬಿಟ್ ಕಾರ್ಡ್ ಮೂಲಕ ಮಾಡುವ ಪಾವತಿಗಳ ಮೇಲೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಬ್ಯಾಂಕುಗಳು ಮತ್ತು ಪಾವತಿ ಸೇವಾ ಸಂಸ್ಥೆಗಳಿಗೆ ಆದೇಶಿಸಿದೆ. ಸೆಪ್ಟೆಂಬರ್ 14 ರಂದು ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ 2007 ರ ಸೆಕ್ಷನ್ 10A ಅಡಿಯಲ್ಲಿ ಸರ್ಕಾರ ಈ ಕುರಿತು ಅಧಿಕೃತ ಗೇಜೆಟ್ ಅಧಿಸೂಚನೆ ಹೊರಡಿಸಿದೆ.

ರೂ.2,000ವರೆಗೆ UPI ಪಾವತಿಗೆ ಶುಲ್ಕವಿಲ್ಲ, ರೂಪೇ ಡೆಬಿಟ್ ಕಾರ್ಡ್‌ ವಹಿವಾಟಿಗೂ ಶುಲ್ಕ ವಿಧಿಸುವಂತಿಲ್ಲ: ಕೇಂದ್ರ ಹಣಕಾಸು ಸಚಿವಾಲಯ
ಹೊಸ ನಿಯಮದ ಪ್ರಕಾರ, 2,000 ರೂಪಾಯಿವರೆಗಿನ ಡಿಜಿಟಲ್ ಪಾವತಿಗಳಿಗೆ ಗ್ರಾಹಕರಾಗಲಿ ಅಥವಾ ಹಣ ಪಡೆಯುವ ವ್ಯಾಪಾರಿಗಳಾಗಲಿ ಯಾವುದೇ ರೀತಿಯ ನೇರ ಅಥವಾ ಪರೋಕ್ಷ ಸೇವಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಉದಾಹರಣೆಗೆ, ಕಿರಾಣಿ ಅಂಗಡಿ ಅಥವಾ ರಸ್ತೆಬದಿಯ ವ್ಯಾಪಾರಿಗಳಿಗೆ 800 ರೂಪಾಯಿಯನ್ನು ಯುಪಿಐ ಅಥವಾ ರೂಪೇ ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದರೆ, ಬ್ಯಾಂಕುಗಳು ಇಬ್ಬರ ಮೇಲೆಯೂ ಹೆಚ್ಚುವರಿ ಶುಲ್ಕ ಹೇರುವಂತಿಲ್ಲ. ಸಣ್ಣ ಉದ್ಯಮಿಗಳು ಹಾಗೂ ದಿನನಿತ್ಯದ ಸಣ್ಣ ಮೊತ್ತದ ವಹಿವಾಟು ಮಾಡುವ ಸಾರ್ವಜನಿಕರಿಗೆ ಈ ನಿಯಮದಿಂದ ಭಾರಿ ಅನುಕೂಲವಾಗಲಿದೆ.

Star Of Kudla

Learn More →

Leave a Reply

Your email address will not be published. Required fields are marked *