ಮಗು ಮತ್ತು ಗಂಡನ ಕೊಲೆಗೆ ಬಿಗ್ ಟ್ವಿಸ್ಟ್: ಪೋಲಿಸರ ಮುಂದೆ ಸತ್ಯ ಒಪ್ಪಿಕೊಂಡ ಹೆಂಡತಿ

ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ಒಂದು ನಡೆದಿದ್ದು ಚಿಕ್ಕಬಾವಣಾವರದಲ್ಲಿ ಮನೆಯಲ್ಲಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತ್ನಿಯೇ ಪ್ರಿಯಕರನ ಜೊತೆಗೆ ಸೇರಿ ಈ ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ.

ಆಗಿದೆ. ಮಲಗಿದ್ದಲ್ಲಿಯೇ ತಂದೆ ಹಾಗೂ ಮಗನ ನಿಗೂಢ ಸಾವಾಗಿದ್ದು ಮಲಗಿದ್ದ ಜಾಗದಲ್ಲಿಯೇ ತಂದೆ ಮತ್ತು ಮಗನ ಶವ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಪತ್ನಿಯ ಪತಿ ಹಾಗೂ ಮಗನ ಕೊಲೆ ಮಾಡಿದ್ದಾಳೆ ಎನ್ನುವ ಆರೋಪ ಇದೀಗ ಕೇಳಿಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಪೊಲೀಸರ ಮುಂದೆ ಅಸಲಿ ಸತ್ಯ ಬಾಯಿಬಿಟ್ಟಿದ್ದಾಳೆ. ಹರಿಣಿ ಪ್ರಿಯಕರ ವಿನಯ್ ಜೊತೆಗೆ ಸೇರಿ ಗಂಡ, ಮಗು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ

ಮೊನ್ನೆ ರಾತ್ರಿ 11 ಗಂಟೆಗೆ ಪ್ರಿಯಕರ ವಿನಯ್ ನನ್ನು ಹರಿಣಿ ಮನೆಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ಸಿಸಿ ಕ್ಯಾಮರಾ ಆಫ್ ಮಾಡಿದ್ದಾಳೆ. ಗಂಡ ಅಭಿನಂದನ್ ತಲೆಗೆ ಸೌಟ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾಳೆ. ಇದನ್ನು ಮಗ ಯದುವೀರ್ ನೋಡಿದ್ದ. ಹೀಗಾಗಿ ಮನನನ್ನು ಕೊಲೆ ಮಾಡಿದ್ದಾಳೆ.

ಆರು ವರ್ಷದ ಹಿಂದೆ ಹರಿಣಿ ಜೊತೆಗೆ ಅಭಿನಂದನ್ ಮದುವೆಯಾಗಿತ್ತು ಹರಿಣಿಯ ಮೇಲೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದರು. ಚಿಕ್ಕಬಾಣವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Star Of Kudla

Learn More →

Leave a Reply

Your email address will not be published. Required fields are marked *