ಮಂಗಳೂರು: ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳ ಬಂಧನ!!

ಮೂಡಬಿದ್ರೆ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಗುರುಪುರ- ಕೈಕಂಬ ಪೊಳಲಿ ದ್ವಾರದ ರಸ್ತೆಯ ಬಳಿ ದಿನಾಂಕ: 15-08-2026 ರಂದು 1.214 ಗ್ರಾಂ ತೂಕದ ಮಾದಕವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲೆತ್ನಿಸಿದ ಬೆಂಜನಪದವು, ಕಲ್ಲಿಗೆ ಎಂಬಲ್ಲಿಯ ನಿವಾಸಿಗಳಾದ ರಕ್ಷಿತ್ ಹಾಗೂ ಅಕ್ಷಯ್ ಬಿ. ಎಂಬವರನ್ನು ಬಜಪೆ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ ಎಚ್.ಎನ್ ನೇತ್ರತ್ವದ ಪೊಲೀಸರ ತಂಡ ದಾಳಿ ನಡೆಸಿ, ವಶಕ್ಕೆ ಪಡೆದು ಆರೋಪಿಗಳಿಂದ ಸುಮಾರು 65 ಸಾವಿರ ರೂಪಾಯಿ ಮೌಲ್ಯದ 1.214 ಕೆ.ಜಿ ತೂಕದ ಮಾದಕ ವಸ್ತು ಗಾಂಜಾ, ಗಾಂಜಾ ತುಂಬಿಸಿದ ಸಣ್ಣ ಜಿಪ್ ಲಾಕ್, ಪ್ಲಾಸ್ಟಿಕ್ ಕವರ್ ಗಳು, ತೂಕ ಮಾಡಲು ತಂದಿದ್ದ ಡಿಜಿಟಲ್ ತೂಕ ಮಾಪಕ, ಎರಡು ಮೊಬೈಲ್ ಪೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ವಾಹನ ಸಹಿತ ಒಟ್ಟು ಸುಮಾರು 1.65 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಈ ಬಗ್ಗೆ ಬಜಪೆ ಬಜಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ.ಸಂ: 132/2026 ರಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Star Of Kudla

Learn More →

Leave a Reply

Your email address will not be published. Required fields are marked *