ಬಂಟ್ವಾಳ: ಸಂಚು ರೂಪಿಸಿ 8 ಲಕ್ಷ ರೂ. ದರೋಡೆ- ಮೂರು ತಿಂಗಳ ಬಳಿಕ ಪ್ರಮುಖ ಸೂತ್ರಧಾರ ಸೇರಿ ಮೂವರ ಬಂಧನ!!

ಬಂಟ್ವಾಳ: ಕಕ್ಕೇಪದವು ರಸ್ತೆಯಲ್ಲಿ ಹಾರ್ಡ್‌ವೇರ್ ಅಂಗಡಿಯಿಂದ ಹಣ ಸಂಗ್ರಹಿಸಿ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು
ಅಡ್ಡಗಟ್ಟಿ ಸುಮಾರು 8 ಲಕ್ಷ ರೂ. ದರೋಡೆಗೈದ ಪ್ರಕರಣವನ್ನು ಮೂರು ತಿಂಗಳ ಬಳಿಕ ಬಂಟ್ವಾಳ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ
ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.ಉಳ್ಳಾಲ ನಿವಾಸಿ ಉಮರ್ ಫಾರೂಕ್, ಕೊಣಾಜೆ ಕಲ್ಲುಗುಂಡಿ ನಿವಾಸಿ ಶಾಕಿರ್ ಹಾಗೂ ಶಕ್ತಿ ನಗರ ನಿವಾಸಿ ಪ್ರವೀತ್ ಶೆಟ್ಟಿ ಬಂಧಿತ ಆರೋಪಿಗಳಾಗಿದ್ದಾರೆ.

ಬಂಟ್ವಾಳ ಎಎಸ್ಪಿ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ, ದರೋಡೆಗೆ ಸಂಚು ರೂಪಿಸಿದ್ದ ಪ್ರಮುಖ ಸೂತ್ರಧಾರ ಸೇರಿದಂತೆ
ಮೂವರನ್ನು ಬಂಧಿಸಿದೆ ಎಂದು ತಿಳಿದುಬಂದಿದೆ.ಆಗಸ್ಟ್ 20ರಂದು ಕಕ್ಕೇಪದವು ರಸ್ತೆಯಲ್ಲಿ ಈ ದರೋಡೆ ನಡೆದಿತ್ತು. ಹಾರ್ಡ್‌ವೇರ್ ಅಂಗಡಿಯಿಂದ ಹಣ ಸಂಗ್ರಹಿಸಿ
ತೆರಳುತ್ತಿದ್ದ ವ್ಯಕ್ತಿಯನ್ನು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ, ಅವರ ಬಳಿಯಿದ್ದ ಸುಮಾರು 8 ಲಕ್ಷ ರೂ. ಹಣವನ್ನು ದೋಚಿ
ಪರಾರಿಯಾಗಿದ್ದರು.ಗ್ರಾಮೀಣ ಪ್ರದೇಶದಲ್ಲಿ ಘಟನೆ ನಡೆದಿದ್ದು, ಆ ಸಮಯದಲ್ಲಿ ಜನಸಂಚಾರವೂ ಕಡಿಮೆಯಿತ್ತು. ಅಲ್ಲದೆ, ಘಟನಾ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳೂ
ಇರಲಿಲ್ಲ. ಹೀಗಾಗಿ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದರು. ಸತತ ತನಿಖೆ ಹಾಗೂ ಕಾರ್ಯಾಚರಣೆಯ ಬಳಿಕ ಇದೀಗ ಮೂರು ತಿಂಗಳ
ನಂತರ ಪ್ರಕರಣವನ್ನು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *