
ಪುತ್ತೂರು: ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿರುವ ಸಮಯ ಭಾರಿ ಕರೆಕ್ಟ್ ಅಂತ ನನಗೆ ಅನಿಸುತ್ತಿಲ್ಲ. ಮೂರು ವರ್ಷ ನಡೆದು ಬಂದ ಹಾದಿಯನ್ನು ಮೀರಿ ಅವರು ಹೋದರೆ ಅವರು ಯಶಸ್ವಿಯಾಗುತ್ತಾರೆ. ಯಾಕೆಂದ್ರೆ ಈಗ ಅವರು ಮುಳ್ಳಿನ ಹಾಸಿಗೆಯಲ್ಲಿ ಮಲಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೇಳಿದ್ದಾರೆ.
ಪುತ್ತೂರು ಎ ವಿ ಜಿ ಇಂಗ್ಲಿಷ್ ಮಿಡಿಯಂ ಸ್ಕೂಲ್ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಮಾಧ್ಯಮದ ಜೊತೆ ಮಾತನಾಡಿದರು. ಈ ಹಿಂದೆ ಭ್ರಷ್ಟಾಚಾರ, ಸೃಜನಪಕ್ಷಪಾತ, ಅಭಿವೃದ್ದಿ ಕುಂಠಿತ, ಗುಂಪುರಾಜಕೀಯವನ್ನು ಕಂಡಿದ್ದೇವೆ. ಈಗಾಗಲೇ ರಾಮಲಿಂಗರೆಡ್ಡಿ ರಾಜೀನಾಮೆ ಕೊಟ್ಟಿರುವುದು ನೋಡಿದರೆ ಮುಖ್ಯಮಂತ್ರಿಯವರು ಮುಳ್ಳಿನ ಹಾಸಿಗೆಯಲ್ಲಿ ಮಲಗಿದ್ದಾರೆ. ಇದು ಭೀಷ್ಮನ ಕೊನೆಯ ದಿನದಂತೆ ಆಗುತ್ತದೆ ಎಂದು ನಾನು ಭಾವಿಸಿದ್ದೇನೆ. ಒಬ್ಬ ಒಕ್ಕಲಿಗ ಸಮಾಜದ ವ್ಯಕ್ತಿ ಮುಖ್ಯಮಂತ್ರಿ ಆಗಿರುವುದು ನಮಗೆ ಗೌರವ ಇದೆ. ಆದರೆ ಅವರ ಯೋಚನೆ ಯಶಸ್ವಿಯಾಗಿ ಪೂರೈಸಲು ಈಗಿನ ದಿನದಲ್ಲಿ ಆಗುವುದಿಲ್ಲ ಎಂದರು.
ಚುನಾವಣಾ ವಿಚಾರದಲ್ಲಿ ನಾನು ಸ್ಪರ್ಧಿಯಲ್ಲ. ನಾನೊಬ್ಬ ಸಂತೃಪ್ತಿ ರಾಜಕಾರಣಿ, ಆದರೆ ರಾಜ್ಯಸಭಾ ಚುನಾವಣೆಯಲ್ಲಿ ಅಪೇಕ್ಷಿತ. ಹಾಗೆಂದು ಲಾಭಿ ಮಾಡುವುದಿಲ್ಲ. ಮೊನ್ನೆ ಕೋರ್ ಕಮಿಟಿ ಮೀಟಿಂಗ್ ನಲ್ಲಿ ಎಲ್ಲಾ 13 ಮಂದಿ ನನ್ನ ಹೆಸರನ್ನೇ ಉಲ್ಲೇಖಿಸಿದ್ದಾರೆ. ಇನ್ನು ರಾಷ್ಟ್ರೀಯ ನಾಯಕರ ತೀರ್ಮಾಣಕ್ಕೆ ನಾನು ಬದ್ದ ಎಂದು ಡಿ ವಿ ಎಸ್ ಹೇಳಿದರು. ರಾಜ್ಯ ಅಧ್ಯಕ್ಷರ ಬದಲಾವಣೆ ಕುರಿತು ಕೇಂದ್ರ ತೀರ್ಮಾಣ ಅಂತಿಮ ಎಂದರು.
ರಾಜಕಾರಣದಲ್ಲಿ ಶುದ್ದೀಕರಣ ನಡೆಯುತ್ತಾ ಇದೆ. ಶುದ್ದಿಕರಣ ಮಾಡುವ ಪ್ರಯತ್ನದಲ್ಲಿ ಸದಾನಂದ ಗೌಡ ಯಶಸ್ವಿಯಾಗಿದ್ದಾನೆ. ಆದರೆ ಶುದ್ದೀಕರಣ ವಿಚಾರದಲ್ಲಿ ಪುತ್ತೂರು ನನ್ನ ಲೆವೆಲಿದ್ದು ಅಲ್ಲ. ನಾನು ರಾಜ್ಯದ ಮುಖ್ಯಮಂತ್ರಿಯಾಗಿ, ರಾಜ್ಯದ ಅಧ್ಯಕ್ಷನಾಗಿ, ಸಚಿವನಾಗಿ ಎಲ್ಲವನ್ನು ಮಾಡಿದವನು ಎಂದು ಹೇಳಿದರು. titlke


