
ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಅವರು ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ ಅವರು ಮಾತನಾಡಿ ಬಿಜೆಪಿಯಲ್ಲಿ ಎಲ್ಲಾ ಮೋರ್ಚಾಗಳಿಗೆ ವಿಶೇಷವಾದ ಸಂಘಟನಾ ಕೆಲಸ ಕಾರ್ಯವಿದೆ. ಅದೇ ರೀತಿ ಹಿಂದುಳಿದ ಮೋರ್ಚಾ ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿಯ ಮಾತೃಸಂಘಟನೆಗೆ ಶಕ್ತಿ ಕೊಡುವ ಕೆಲಸ ಮಾಡುತ್ತಾ ಬಂದಿದೆ. ಹಾಗಾಗಿ ಎಲ್ಲಾ ಮಂಡಗಳಲ್ಲಿ ಮೋರ್ಚಾಗಳನ್ನು ಜೋಡಿಸಿಕೊಂಡು ಸಂಘಟನೆಗೆ ಶಕ್ತಿ ಕೊಡುವ ಕೆಲಸ ಮಾಡಲಾಗಿದೆ. ಪಕ್ಷ ಎಂದಾಗ ಎಲ್ಲಾ ಸಮುದಾಯ, ಸಂಘಟನೆಗಳ ಭಾವನೆಗಳಿಗೆ ಗೌರವ ಕೊಡಬೇಕೆಂದು ಮತ್ತು ಬಿಜೆಪಿ ಎಲ್ಲಾ ಸಮುದಾಯವನ್ನು ಮುಟ್ಟಬೇಕೆಂಬ ಕಾರಣಕ್ಕಾಗಿ ಮೋರ್ಚಾಗಳನ್ನು ಮಾಡಿದೆ. ಹಿಂದುದಳಿದ ಮೋರ್ಚಾ ಈ ರಾಜ್ಯ, ಜಿಲ್ಲೆ, ಮಂಡಲದ ಅತಿ ಹೆಚ್ಚು ಸಂಖ್ಯೆಯಲ್ಲಿರುವುದು ಹಿಂದುಳಿದ ವರ್ಗಗಳ ಮೋರ್ಚಾ. ಸುಮಾರು ಶೇ. 60 ಮತದಾರರು ಬಿಜೆಪಿ ಅಥವಾ ಬೇರೆ ರಾಜಕೀಯ ಪಾರ್ಟಿಯಲ್ಲಿ ಇರುವುದು ಅದು ಹಿಂದುಳಿದ ವರ್ಗಗಳ ಮೋರ್ಚಾದಲ್ಲಿದೆ. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಕೂಡಾ ಕೇಂದ್ರ ಸರಕಾರದಲ್ಲಿ ಸುಮಾರು 27 ಮಂದಿ ಮಂತ್ರಿಗಳಿದ್ದಾರೆ. ನಮ್ಮ ಸರಕಾರ ಇರುವಾಗ ಸುಮಾರು 16 ಮಂದಿ ಒಬಿಸಿಯವರೇ ಮಂತ್ರಿ ಸ್ಥಾನದಲ್ಲಿದ್ದದ್ದು. ಇವತ್ತು ಸಂಘಟನೆಯಲ್ಲಿ ಪ್ರಮುಖರಾಗಿರುವುದು ಕೂಡಾ ಒಬಿಸಿಯವರೇ. ಜಿಲ್ಲೆಯ ಅಧ್ಯಕ್ಷರು ಕೂಡಾ ಒಬಿಸಿಯವರು. ಇವತ್ತು ಪದಾಧಿಕಾರಿಗಳ ಪಟ್ಟಿ ಘೋಷಣೆ ಆಗಿದೆ. ನಮ್ಮ ಸಂಘಟನೆಗೆ ಶಕ್ತಿ ಕೊಡಬೇಕಾದರೆ ನಾವು ನಿರಂತರವಾಗಿ ಪಕ್ಷದ ವ್ಯವಸ್ಥೆಯಲ್ಲಿ ನಾವ ಜೋಡಿಸಿಕೊಳ್ಳಬೇಕು. ಆಗ ನಾವು ವ್ಯಕ್ತಿಗತವಾಗಿ ಬೆಳೆಯುತ್ತೇವೆ. ಕೊಟ್ಟಂತಹ ಜವಬ್ದಾರಿಯನ್ನು ಸರಿಯಾಗಿ ನಿಬಾಯಿಸಬೇಕೆಂದರು.
ಹಿಂದುಳಿದ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಮಂಡಲದ ಪ್ರಭಾರಿಯಾಗಿರುವ ಶಶಿಧರ್ ಕಲ್ಮಂಜ ಅವರು ಮಾತನಾಡಿ ಇವತ್ತು ಸಮಿತಿ ರಚನೆಯಾಗಿದೆ ಮುಂದಿನ ದಿನ ಇಲ್ಲಿರುವ 7 ಶಕ್ತಿ ಕೇಂದ್ರದಲ್ಲಿ ಕೂಡಾ ಒಬಿಸಿ ಮೋರ್ಚಾದ ಎರಡು ಮಂದಿಯ ತಂಡವಾಗಬೇಕು. ಮಹಾಶಕ್ತಿ ಕೇಂದ್ರಕ್ಕೂ ಎರಡು ತಂಡವಾಗಬೇಕು. ನೂತನ ಪದಾಧಿಕಾರಿಗಳ ಸಮಿತಿಯಲ್ಲಿ ತಂಡಗಳ ರಚನೆಯಾಗಬೇಕು. ಪ್ರತಿ 15 ದಿನಕ್ಕೆ ಒಮ್ಮೆ 11 ಮಂದಿಯ ಪದಾಧಿಕಾರಿಗಳು ಸಭೆ ಸೇರಿ ಚರ್ಚಿಸಬೇಕು. ತಿಂಗಳಿಗೊಮ್ಮೆ ಎಲ್ಲರು ಸೇರಿ ಸಭೆ ನಡೆಸಬೇಕು. ಮುಂದಿನ ದಿನ ಒಬಿಸಿ ಮೋರ್ಚಾವನ್ನು ಹಂತ ಹಂತವಾಗ ಗಟ್ಟಿ ಮಾಡಬೇಕು ಎಂದ ಅವರು ಪಕ್ಷದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಾಗ ಹುದ್ದೆಗಳು ತನ್ನಿಂದ ತಾನೆಗೆ ಬರುತ್ತವೆ. ಇದಕ್ಕೆ ಉದಾಹರಣೆ ನಾನೆ ಆಗಿದ್ದೇನೆ ಎಂದವರು ಹೇಳಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತ ಅವರು ಮಾತನಾಡಿ ಹಿರಿಯರ ಪುಣ್ಯದಿಂದ ಬಿಜೆಪಿಯ ಪದಾಧಿಕಾರಿಗಳಾಗುವ ಯೋಗ ಲಭಿಸುತ್ತದೆ. ಬಿಜೆಪಿ ಕಾರ್ಯಕರ್ತ ಅನ್ನುವುದು ಯಾವತ್ತೂ ಶಾಶ್ವತ. ಪದಾಧಿಕಾರಿ ಅನ್ನುವುದು ಜವಾಬ್ದಾರಿ ಮಾತ್ರ. ಸಿಕ್ಕಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದರೆ ಮುಂದೆ ಇನ್ನು ಹೆಚ್ಚಿನ ಅವಕಾಶ ಲಭಿಸುತ್ತದೆ ಎಂದ ಅವರು ನಮ್ಮ ಮುಂದೆ ಎಸ್.ಐ.ಆರ್ ಎಂಬ ದೊಡ್ಡ ಜವಾಬ್ದಾರಿ ಇದೆ. ಮತದಾರರ ಪಟ್ಟಿಯಲ್ಲಿರುವ ಯಾವುದೇ ಹೆಸರು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಸೇರ್ಪಡೆಯ ಕೆಲಸವನ್ನೂ ಮಾಡಬೇಕು. ಪಕ್ಷ ನೀಡಿದ ಕೆಲಸವನ್ನು ನೂರಕ್ಕೆ ನೂರು ಪಾಲಿಸಬೇಕು. ಆಗ ನಾವು ಯಶಸ್ವಿಯಾಗುತ್ತೇವೆ ಎಂದರು.
ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ,
ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲದ ಹಿಂದುಳಿದ ಮೋರ್ಚಾದ ನೂತನ ಅಧ್ಯಕ್ಷ ನಿರಂಜನ್ ಮಾನ್ಯ,ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ರವಿ ಸೂಮರ್, ವಿದ್ಯಾ ಗೌರಿ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ,ಹರೀಶ್ ಆಚಾರ್ಯ, ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ, ಮಹಿಳಾ ಮೋರ್ಚಾದ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ದೀಕ್ಷಾ ಪೈ, ವಿಜಯಲಕ್ಷ್ಮೀ ಶಗ್ರಿತ್ತಾಯ, ಆಶಾ ಭಗವಾನ್, ನಿಶ್ಮಿತ ಸಹಿತ, ಹಿಂದುಳಿದ ಮೋರ್ಚಾಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.


