
ನವದೆಹಲಿ, ಅಕ್ಟೋಬರ್ 05: ಲೋಕಸಭಾ ಚುನಾವಣೆಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತದಲ್ಲಿ ಈಗಾಗಲೇ ಚುನಾವಣೆ ಮುಕ್ತಾಯಗೊಂಡಿದೆ. ಶೇ. 63.88 ಮತದಾನವಾಗುವ ಮೂಲಕ ಮತದಾರ ಉತ್ತಮವಾಗಿ ಸ್ಪಂದಿಸಿದ್ದಾರೆ.
90 ಸದಸ್ಯ ಬಲವನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆ ಸೆಪ್ಟಂಬರ್ 18, 25 ಮತ್ತು ಅಕ್ಟೋಬರ್ 1ರಂದು, ಮೂರು ಹಂತದಲ್ಲಿ ನಡೆದಿತ್ತು.ಕಾಂಗ್ರೆಸ್ – ನ್ಯಾಶನಲ್ ಕಾನ್ಫರೆನ್ಸ್ – ಪ್ಯಾಂಥರ್ಸ್ ಪಾರ್ಟಿ – ಸಿಪಿಐ (ಎಂ) ಹೊಂದಾಣಿಕೆಯಿಂದ ಕಣಕ್ಕಿಳಿದಿತ್ತು. ಬಿಜೆಪಿ ಮತ್ತು ಮೆಹಬೂಬ ಮುಫ್ತಿಯ ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿ ಇಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿವೆ. ಆಪ್, ಬಿಎಸ್ಪಿ ಸೇರಿ ಎಂಟು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿವೆ.
ಅಕ್ಟೋಬರ್ 5ರ ಸಂಜೆ ಆರು ಗಂಟೆಗೆ ಮತದಾನ ಮುಕ್ತಾಯಗೊಂಡಿದ್ದು, ಸಂಜೆ 6.30ರ ನಂತರ ಚುನಾವಣೋತ್ತರ ಸಮೀಕ್ಷೆ ಬಹಿರಂಗ ಪಡಿಸಲು ಕೇಂದ್ರ ಚುನಾವಣಾ ಆಯೋಗ ಅನುಮತಿಯನ್ನು ನೀಡಿದೆ. ಎಕ್ಸಿಟ್ ಪೋಲ್ ಮೇಲೆ ಜನರಿಗೆ ಬಾರೀ ಕುತೂಗಲ ಮೂಡಿದೆ.


