ಮಂಗಳೂರಿನ ಮಾಜಿ ಶಾಸಕ ಮುಯ್ದಿನ್ ಬಾವ ಅವರ ಸಹೋದರ ಉದ್ಯಮಿ ಮುಮ್ತಾಜ್ ಅಲಿ ಕಾರು ಅಪಘಾತಕ್ಕೀಡದ ಸ್ಥಿತಿಯಲ್ಲಿ ಕೂಳೂರು ಬ್ರಿಜ್ಜಿನಲ್ಲಿ ಪತ್ತೆ… ಆತ್ಮಹತ್ಯೆ ಶಂಕೆ.

ಮಂಗಳೂರು ಉತ್ತರ ಕ್ಷೇತ್ರದ  ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರು  ಸಹೋದರ ಮುಮ್ತಾಜ್ ಆಲಿ(52)  ಇಂದು ನಸುಕಿನ ಜಾವ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ  ಮನೆಯಿಂದ ಹೊರಟ್ಟಿದ್ದ  ಅವರು ಬಳಿಕ ಮನೆಯವರ ಸಂಪರ್ಕಕ್ಕೆ ಸಿಗದೆ ಕಣ್ಮರೆಯಾಗಿದ್ದರು. ಅವರ ಕಾರು ಬೆಳಗ್ಗೆ ೫ ಗಂಟೆ ಸುಮಾರಿಗೆ  ಮಂಗಳೂರಿನ ಕುಳೂರಿನ ಸೇತುವೆ ಬಳಿ ಹಾನಿಯಾದ  ಸ್ಥಿತಿಯಲ್ಲಿ ಪತ್ತೆಯಾಗಿತ್ತು.



ಕಾರು ಸೇತುವೆ ಬಳಿ ಪತ್ತೆಯಾದ ಹಿನ್ನಲೆಯಲ್ಲಿ, ಅವರು ನೀರಿಗೆ ಹಾರಿರಬಹುದು ಅಥಾವ ಯಾರದರೂ ಎಸೆದಿರಬಹುದು ಎಂಬ ಶಂಕೆಯಲ್ಲಿ ನದಿಯಲ್ಲಿ ಎಸ್ ಡಿ ಆರ್ ಎಫ್,ಎನ್ ಡಿ ಆರ್ ಎಫ್,ಅಗ್ನಿಶಾಮಕದಳದ ತಂಡದವರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಾರು ಪತ್ತೆಯಾದ ಸ್ಥಳಕ್ಕೆ ಮಾಜಿ ಶಾಸಕ ಮೊಯಿದ್ದೀನ್ ಬಾವ ಸೇರಿದಂತೆ ಕುಟುಂಬಸ್ಥರು ಭೇಟಿ ನೀಡಿದ್ದಾರೆ

ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಆಗಮಿಸಿ ಪರಿಶೀಲನೆ ನಡೆಸಿದರು.  ಈ ವೇಳೆ ಮಾಧ್ಗಯಮಗಳ ಜತೆ ಮಾತನಾಡಿದ ಅವರು “ ಮುಮ್ತಾಜ್‌ ಅವರು ಮುಂಜಾನೆ ಮೂರು ಗಂಟೆಗೆ ಮನೆಯಿಂದ   ಬಿಎಂಡಬ್ಲೂ ಕಾರ್ ಚಲಾಯಿಸಿಕೊಂಡು  ಬಂದಿದ್ರು. ಕುಳೂರು ಸೇತುವೆ ಯಲ್ಲಿ ಕಾರು ಅಫಘಾತವಾಗಿ ಕಾಣೆಯಾಗಿದ್ದಾರೆ. ಈ ವಿಚಾರ ಮಗಳಿಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ .“ ಮುಮ್ತಾಜ್‌  ಸೇತುವೆ ಯಿಂದ ಕೆಳಗೆ ಹಾರಿರುವ ಬಗ್ಗೆ ಸಂಶಯ ಇದೆ. ಹೀಗಾಗಿ ವಿವಿಧ ತಂಡಗಳು ನದಿಯಲ್ಲಿ ಶೋಧ ಕಾರ್ಯ ಮಾಡುತ್ತಿದ್ದಾರೆ. ಎಫ್ ಎಸ್ ಎಲ್ ಅಧಿಕಾರಿಗಳು ಕಾರು ಪರಿಶೀಲನೆ ಮಾಡಿದ್ದಾರೆ. ಕುಟುಂಬದ ಸದಸ್ಯರಿಂದಲೂ ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಿದ್ದೇವೆ. ಘಟನೆಯ ಬಗ್ಗೆ ತನಿಖೆಯನ್ನು ಮಾಡುತ್ತಿದ್ದೇವೆ ಎಂದು ಪೊಲೀಸ್‌ ಕಮೀಷನರ್‌ ತಿಳಿಸಿದ್ದಾರೆ.

ವಿವಿಧ ಉದ್ಯಮ ಮತ್ತು ಮಸೀದಿ ಕಮಿಟಿಗಳಲ್ಲಿ ಮಮ್ತಾಜ್ ಆಲಿ ತೊಡಗಿಸಿಕೊಂಡಿದ್ದರು. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಭೇಟಿ ನೀಡಿದ್ದ ವೇಳೆ ಕಮೀಷನರ್ ಮುಂದೆ ಮೊಯಿದ್ದೀನ್ ಬಾವ ಕಣ್ಣೀರು ಹಾಕಿದರು.

News Editor

Learn More →

Leave a Reply

Your email address will not be published. Required fields are marked *