
ಪುತ್ತೂರು ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾರತೀಯ ಸೇನೆಗೆ ಅಗ್ನಿ ವೀರ್ ಆಗಿ ಆಯ್ಕೆಯಾಗಿ ದೇಶಸೇವೆಗೆ ತೆರಳುತ್ತಿರುವ ವಿಜೇತ್ ಮಜ್ಜಾರ್ ರವರಿಗೆ ಗೌರವರ್ಪಣೆ ಅವರ ಮನೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ ಹಾಗೂ ಯುವಮೋರ್ಚಾ ಪ್ರಬಾರಿ ರತನ್ ರೈ ಕುಂಬ್ರಯವರು ಮಾನ್ಯ ಪ್ರಧಾನಮಂತ್ರಿ ಯವರು ಅಗ್ನಿಪಥ್ ಸೇನಾ ಸೇರಲು ಯುವಕರಿಗೆ ಅವಕಾಶ ಮಾಡಿಕೊಟ್ಟಿದಾರೆ, ಆ ಮೂಲಕ ದೇಶ ಸೇವೆ ಮಾಡಲು ನಮ್ಮ ಊರಿನ ಪ್ರತಿಭೆಗೆ ಅವಕಾಶ ಸಿಕ್ಕಿದೆ ಎಂದರು. ಯುವ ಮೋರ್ಚಾ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಶಿಶಿರ್ ಪೆರ್ವೋಡಿ ಇವರು ಗೌರಾರ್ಪಣೆ ಸಲ್ಲಿಸಿದರು ನೆಟ್ಟಣಿಗೆ ಮೂಡನ್ನೂರ್ ಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಶ್ ರೈ ಪರ್ಪುoಜ. ಯುವಮೋರ್ಚಾ ತಾಲೂಕು ಕಾರ್ಯದರ್ಶಿ ಸುದರ್ಶನ್ ರೈ.ಕೆದoಬಾಡಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಶರತ್ ಗುತ್ತು, ಅರಿಯಡ್ಕ ಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಶ್ ಮಯೂರ. ವಾರ್ಡ್ ಕಾರ್ಯದರ್ಶಿ ಪ್ರಸಾದ್ ಮಡಿವಾಳ ಕೋಡಿಯಡ್ಕ, ಪ್ರಮುಖರಾದ ಚಿರಾಗ್ ರೈ, ಕೀರ್ತನ್, ತಿಮಪ್ಪ ಪೂಜಾರಿ,ಮಜ್ಜಾರ್.ಲೋಕನಾಥ್ ಪೂಜಾರಿ,ಮಜ್ಜಾರ್.ವಿಜೇತ್ ರವರ ತಾಯಿ ಹಾಗೂ ಕುಟುಂಬಸ್ಥರು ಉಪಸಿತರಿದ್ದರು ಈ ಕಾರ್ಯಕ್ರಮದಲ್ಲಿ ವಾರ್ಡ್ ಅಧ್ಯಕ್ಷರಾದ ಯುವರಾಜ್ ಪೂಂಜಾ ಸ್ವಾಗತಿಸಿ ವಂದಿಸಿದರು.


