ಕಳವು ಪ್ರಕರಣ – ಇಬ್ಬರು ಅಪ್ರಾಪ್ತರು ಪೊಲೀಸ್ ವಶಕ್ಕೆ.

ಬಜ್ಪೆ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಕಳವು ಮಾಡುತ್ತಿದ್ದ ಆರೋಪದಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿಯತರಿಬ್ಬರೂ ಸೂರಲ್ಪಾಡಿಯವರು ಎಂದು ತಿಳಿದು ಬಂದಿದೆ. ಇವರಿಂದ ಒಂದು ಪಲ್ಸರ್‌ ಬೈಕ್‌ ಹಾಗೂ 30 ಸಾಔಇರ ರೂ. ಮೌಲ್ಯದ ಬೆಳ್ಳಿಯ ಸುತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಕೊಂಡಿದ್ದಾರೆ.

ಒಂದು ವಾರದ ಹಿಂದೆ ತೆಂಕ ಎಕ್ಕಾರಿನಲ್ಲಿರುವ ಮೆಸ್ಕಾಂ ಸಿಬ್ಬಂದಿಯೊಬ್ಬರ ಮನೆಯಲ್ಲಿ ಬೆಳ್ಳಿಯ ದೇವರ ಪೂಜಾ ವಸ್ತುಗಳು ಕಳವಾಗಿತ್ತು. ಈ ಸಂಬಂಧ ಅವರು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು, ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಬಾಲಕರನ್ನು ಬಾಲ ನ್ಯಾಯ ಮಂಡಳಿಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ

News Editor

Learn More →

Leave a Reply

Your email address will not be published. Required fields are marked *