ಪುತ್ತೂರು : ಹರ್ಷಾ ಶೋ ರೂಂನ ಗೋದಾಮಿಗೆ ಬೆಂಕಿ

ಪುತ್ತೂರು : ಪುತ್ತೂರಿನ ಹೆಸರಾಂತ ಗೃಹಪಯೋಗಿ ಉಪಕರಣ ಮಾರಾಟ ಮಳಿಗೆಯ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಮಂಗಳವಾರ ನಸುಕಿನ ಜಾವ ಪುತ್ತೂರು ನಗರದ ದರ್ಭೆ ಎಂಬಲ್ಲಿ ನಡೆದಿದೆ. ದರ್ಭೆಯಲ್ಲಿರುವ ಹರ್ಷಾ ಶೋ ರೂಂ ನ ಗೋದಾಮ್‌ ಬೆಂಕಿ ಅವಘಡಕ್ಕೆ ತುತ್ತಾದ ಕಟ್ಟಡ.
ಪುತ್ತೂರು – ದರ್ಭೆ ಮುಖ್ಯ ರಸ್ತೆಯಲ್ಲಿರುವ ಸಂತೃಪ್ತಿ ಹೋಟೇಲ್‌ ನ ಹಿಂಭಾಗ ಹರ್ಷಾ ಶೋ ರೂಂ ನವರ ಗೋಡೌನ್‌ ಇದೆ. ಇಲ್ಲಿ ಕೋಟ್ಯಾಂತರ ಮೌಲ್ಯದ ಎಲೆಕ್ಟ್ರಾನಿಕ್ಸ್‌ ಹಾಗೂ ಗೃಹಪಯೋಗಿ ವಸ್ತುಗಳನ್ನು ಹರ್ಷಾ ಸಂಸ್ಥೆಯೂ   ಶೇಖರಿಸಿಟ್ಟಿತ್ತು. ಇಂದು ನಸುಕಿನ ಜಾವ ಇದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗೋದಾಮಿನ ಒಳಗಿದ್ದ ವಸ್ತುಗಳು ಹೊತ್ತಿ ಉರಿಯುತ್ತಿದ್ದ ತೀವ್ರತೆಗೆ ಬೆಂಕಿಯ ಜ್ವಾಲೆಗಳು ಎತ್ತರಕ್ಕೆ ಚಿಮ್ಮಿ ಆತಂಕ ಸೃಷ್ಟಿಸಿದ್ದವು.
ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪುತ್ತೂರು ನಗರ ಠಾಣೆ ಪೊಲೀಸರು ಸೂಕ್ತ ಬಂದೋಬಸ್ತು ವ್ಯವಸ್ತೆ ಮಾಡಿದ್ದಾರೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸಂಸ್ಥೆಯೂ ಗೋಡೌನ್‌ ಗೆ ವಿಮೆ ಸೌಲಭ್ಯ ಹೊಂದಿದ್ದು, ನಷ್ಟ ರಿಕವರಿ ಆಗಬಹುದೆಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?