ಕಡಬ : ಅಕ್ರಮ ಸ್ಪೋಟಕ ಬಳಸಿ ಕಲ್ಲು ಸ್ಪೋಟ :ಮನೆಗೆ ಹಾನಿ-ದೂರು ದಾಖಲು.

ಕಡಬ : ಅಕ್ರಮ ಸ್ಪೋಟಕ ಬಳಸಿ ಕಲ್ಲು ಒಡೆಯುತ್ತಿರುವ ಪರಿಣಾಮ ಮನೆಯ ಶೀಟುಗಳಿಗೆ ಹಾನಿಯಾಗುತ್ತಿರುವ ಹಾಗೂ ಪರಿಸರ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಮನೆ ಮಾಲಿಕ ಸ್ಫೋಟ ನಡೆಸುವವನ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ನಡೆದಿದೆ.

ಕಡಬ ತಾಲೂಕು ಯೇನೆಕಲ್ಲು ಗ್ರಾಮದ ಕುಕ್ಕಿಪ್ಪನ ಮನೆ ಎಂಬಲ್ಲಿನ ನಿವಾಸಿ ಆನಂದ ಗೌಡ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇವರ ಮನೆ ಸಮೀಪದ ನಿವಾಸಿ ದಯಾನಂದ ಎಂಬವರು ಏನೇಕಲ್ಲು ಗ್ರಾಮದ ಅಜಿರುಪೂಲಿ ಎಂಬಲ್ಲಿ ಅವರ ಜಮೀನಿನಲ್ಲಿ ಕಳೆದ ಎರಡು ತಿಂಗಳಿನಿಂದ ಅಕ್ರಮವಾಗಿ ಸ್ಪೋಟಕಗಳನ್ನು ಬಳಸಿ ಕಲ್ಲುಗಳನ್ನು ಒಡೆಡು ಸೈಜು ಕಲ್ಲಗಳನ್ನಾಗಿ ತಯಾರಿಸುತ್ತಿದ್ದು, ಇದರಿಂದ ಸ್ಪೋಟಗೊಂಡ ಕಲ್ಲುಗಳು ಆನಂದ ಗೌಡ ಅವರ ಮನೆಯ ಶೀಟುಗಳ ಮೇಲೆ ಸಿಡಿದು ಮನೆ ಶೀಟುಗಳು ಹಾನಿಗೊಂಡಿದೆ ಹಾಗೂ ಕಲ್ಲು ಹುಡಿಯಿಂದಾಗಿ ಪರಿಸರ ಮಾಲಿನ್ಯವೂ ಉಂಟಾಗುತ್ತಿದೆ ಎಂದು ನೀಡಿದ ದೂರಿನಂತೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ : 23 /2024, ಕಲಂ: 427 ಐಪಿಸಿ ಮತ್ತು ಕಲಂ:5, 9B(1)(b) ಸ್ಪೋಟಕ ಕಾಯ್ದೆ ಅಧಿನಿಯಮ 1884 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

News Editor

Learn More →

Leave a Reply

Your email address will not be published. Required fields are marked *