ವಿಟ್ಲ: ಹಿಂದೂ ಜಾಗರಣ ವೇದಿಕೆ ಸದಸ್ಯ ಅಕ್ಷಯ್ ರಜಪೂತ್ ಗಡಿಪಾರು: ಹಾವೇರಿ ಜಿಲ್ಲೆಗೆ ಗಡಿಪಾರು

ವಿಟ್ಲ : ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಸಮಿತಿ ಸದಸ್ಯ ಅಕ್ಷಯ್ ರಜಪೂತ್ ನನ್ನು ರಾತ್ರಿ ವೇಳೆ ಪೊಲೀಸರು ಮನೆಯಿಂದ ಬಂಧಿಸಿ ಹಾವೇರಿ ಜಿಲ್ಲೆಗೆ ಗಡಿಪಾರು ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಅಕ್ಷಯ್ ರಜಪೂತ್ ಗೆ ಗಡಿಪಾರು ಆದೇಶ ಇದ್ದ ಕಾರಣ ವಿಟ್ಲ ಪೊಲೀಸರು ಬಂಧಿಸಿ ಇದೀಗ ಹಾವೇರಿ ಜಿಲ್ಲೆಗೆ ಕೊಂಡೊಯ್ಯುತ್ತಿದ್ದಾರೆ. ವಿಟ್ಲ ಠಾಣೆಯಲ್ಲಿ ಇದೇ ಮೊದಲ ಬಾರಿಗೆ ಗಡಿಪಾರು ಆದೇಶವನ್ನು ಪಾಲಿಸಿ, ಬಂಧಿಸಿ ಬೇರೆ ಜಿಲ್ಲೆಗೆ ಕೊಂಡೊಯ್ಯುವ ಕಾರ್ಯ ನಡೆದಿದೆ. ಪೊಲೀಸರ ಮಾಹಿತಿಯ ಪ್ರಕಾರ ಅಕ್ಷಯ್ ರಜಪೂತ್ ಅನೇಕ ಕ್ರಿಮಿನಲ್‌ ಹಿನ್ನಲೆಯುಳ್ಳ ವ್ಯಕ್ತಿಯಾಗಿದ್ದು, ಅನೇಕ ಕೋಮುಸಂಘರ್ಷಗಳು ನಡೆಯುವ ಹುನ್ನಾರಕ್ಕೆ ಪ್ರಚೋದನೆ ನೀಡುತ್ತಿದ್ದ ಮತ್ತು ಕೆಲವೊಂದು ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂಬುವುದು ಪೊಲೀಸರ ಆರೋಪವಾಗಿದೆ.

News Editor

Learn More →

Leave a Reply

Your email address will not be published. Required fields are marked *