
ಕರ್ನಾಟಕ ಸರ್ಕಾರವು ಸ್ಥಗಿತಗೊಂಡಿರುವ ಸಿ.ಎಲ್-2ಎ (CL-2A) ಹಾಗೂ ಸಿ. ಎಲ್ 9A ಮದ್ಯದಂಗಡಿಗಳ ಸನ್ನದುಗಳ ಮರು ಹಂಚಿಕೆಗಾಗಿ ಇ-ಹರಾಜು (e-Auction) ಪ್ರಕ್ರಿಯೆ ಆರಂಭಿಸಿದ್ದು, ಆಸಕ್ತ ಬಿಡ್‌ದಾರರ ಆನ್‌ಲೈನ್ ನೋಂದಣಿ ಜುಲೈ 3ರಿಂದ ಆರಂಭವಾಗಿದೆ.

ಇ-ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ನೋಂದಾಯಿತ ಬಿಡ್‌ದಾರರು ಹಾಗೂ ಅಬಕಾರಿ ಇಲಾಖೆಯ ನೋಡಲ್ ಅಧಿಕಾರಿಗಳಿಗಾಗಿ ಜುಲೈ 14ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನ ಜಿಲ್ಲಾ ಪಂಚಾಯತ್ ಕಚೇರಿಯ ನೇತ್ರಾವತಿ ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.
ಇ-ಹರಾಜಿನ ನೇರ ಬಿಡ್ಡಿಂಗ್ ಪ್ರಕ್ರಿಯೆಯು ಜುಲೈ 24ರಿಂದ 31ರವರೆಗೆ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 29 ಸಿ.ಎಲ್-2ಎ ಮದ್ಯದಂಗಡಿಗಳ ಸನ್ನದುಗಳನ್ನು ಹರಾಜಿಗೆ ಗುರುತಿಸಲಾಗಿದೆ. ಇದರಲ್ಲಿ ಮಂಗಳೂರು ದಕ್ಷಿಣ ವಲಯ-2ರ ವಲಯ ವ್ಯಾಪ್ತಿಯ 3 ಮದ್ಯದಂಗಡಿಗಳು ಸೇರಿದ್ದು, ಅವು ಜನರಲ್(ಸಾಮಾನ್ಯ )ವರ್ಗಕ್ಕೆ ಮೀಸಲಿರಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು ಇ-ಹರಾಜು ಪ್ರಕ್ರಿಯೆ ಹಾಗೂ ತರಬೇತಿ ಶಿಬಿರದಲ್ಲಿ ಭಾಗವಹಿಸುವಂತೆ ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ


