ಅಧಿಕ ಬಡ್ಡಿ ನೀಡುವ ಆಮಿಷ ಒಡ್ಡಿ 75 ಲಕ್ಷ ರೂಪಾಯಿ ವಂಚನೆ ಎಸಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ಯುವಕನಿಗೆ 75 ಲಕ್ಷ ವಂಚನೆ ಎಸಗಲಾಗಿದೆ.

ಆನ್ಲೈನ್ ಗೇಮ್ ದಾಸನಾಗಿದ್ದ ಗೌರಿಪುರದ ಯುವಕ ಜಾಲತಾಣಗಳ ಜಾಹೀರಾತಿನ ಆಕರ್ಷಣೆಗೆ ಒಳಗಾಗಿದ್ದ. 2023ರಲ್ಲಿ ಯುವಕ 5000 ಹೂಡಿಕೆ ಮಾಡಿದ್ದ. ಇದಕ್ಕೆ ಪ್ರತಿಯಾಗಿ 15 ಸಾವಿರ ರೂಪಾಯಿ ಲಾಭ ಪಡೆದಿದ್ದ. ಇದರಿಂದ ಪ್ರೇರೇಪಿತನಾಗಿ ಹೆಚ್ಚು ಹಣ ಹೂಡಿಕೆ ಮಾಡಿದ್ದ ಮೇ ತಿಂಗಳವರೆಗೆ ಹೂಡಿಕೆ ಮಾಡಿದರು ಕೂಡ ಲಾಭ ಬಂದಿರಲಿಲ್ಲ. ಈ ಹಿನ್ನೆಲೆ ಯುವಕ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದಿದ್ದಾರೆ.


