ಮಂಗಳೂರು ದಕ್ಷಿಣ ಉಪವಿಭಾಗದ ಪೊಲೀಸರು ಸುಮಾರು 7 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಅಸಾಮಿಯೋರ್ವನನ್ನು ಆಗಸ್ಟ್ 2 ರಂದು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ಕರ್ತವ್ಯ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಅಡಗಿದ್ದ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಬಂಧಿತನ ಹೆಸರು ಉಮ್ಮರ್ ನವಾಫ್ (33) , ತಂದೆ ಅಬ್ದುಲ್ ಖಾದರ್. ಮೂಲತಃ ಈತ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮಾರ್ಗತಲೆ ನಿವಾಸಿಯಾಗಿದ್ದಾರೆ. ಪ್ರಸ್ತುತ ಈತ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಮಂಜೇಶ್ವರದ ಪಾವೂರು ಪೋಸ್ಟ್ ವ್ಯಾಪ್ತಿಯ ಕುಂಡಪ್ಪು ಗೇರುಕಟ್ಟೆಯ ನಾಜಿಯಾ ಮಂಜೀಲ್ ನಲ್ಲಿ ವಾಸವಾಗಿದ್ದ.
ಆರೋಪಿ ಉಮ್ಮರ್ ನವಾಫ್ ಮೇಲೆ ಸುಮಾರು 13 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯಕ್ಕೆ ನಿರಂತರವಾಗಿ ಗೈರು ಹಾಜರಾಗಿದ್ದ ಕಾರಣ ಘನ ನ್ಯಾಯಾಲಯವು ಈತನ ವಿರುದ್ಧ 30 ಕ್ಕೂ ಹೆಚ್ಚು ವಾರಂಟ್‍ಗಳನ್ನು ಹೊರಡಿಸಿತ್ತು.ಮೇಲಿನ ಪ್ರಕರಣಗಳಲ್ಲಿ ಉಳ್ಳಾಲ ಪೊಲೀಸ್ ಠಾಣಾ ಮೊ.ನಂ 206/2012, U/s 143, 14, 148, 323, 427, 504, 506, 149 ಐಪಿಸಿ, ಉಳ್ಳಾಲ ಪೊಲೀಸ್ ಠಾಣಾ ಮೊ.ನಂ 27/2017, U/s 387 ಐಪಿಸಿ, ಉಳ್ಳಾಲ ಪೊಲೀಸ್ ಠಾಣಾ ಮೊ.ನಂ 183/17 U/s 143, 147, 148, 448, 504, 324, 323, 506, 427R/w 149 ಐಪಿಸಿ ಪ್ರಕರಣಗಳಲ್ಲಿ ಘನ ನ್ಯಾಯಾಲಯದ ಆದೇಶದಂತೆ ಪ್ರೋಕ್ಲಮೇಶನ್ ಜಾರಿ ಮಾಡಲಾಗಿರುತ್ತದೆ.


