
ಸರ್ಕಾರಿ ಆಸ್ಪತ್ರೆಗಳು ಜನರ ತೆರಿಗೆ ಹಣದಿಂದ ನಿರ್ಮಾಣವಾದ ಸಾರ್ವಜನಿಕ ಆಸ್ತಿ. ಬಡವರು, ಮಧ್ಯಮ ವರ್ಗದವರು ಮತ್ತು ಗ್ರಾಮೀಣ ಭಾಗದ ಜನರು ಮುಖ್ಯವಾಗಿ ಇವುಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ಇಂತಹ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸುವ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆ, ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
“ಜನರ ಹಣದಿಂದ ನಿರ್ಮಿತವಾದ ಆಸ್ಪತ್ರೆಯನ್ನು ಖಾಸಗಿಗೆ ನೀಡಬಹುದು ಅಂದ್ರೆ, ಜನರ ಮತದಿಂದ ಬಂದ ರಾಜಕೀಯ ಸ್ಥಾನವನ್ನೂ ಜನರು ಮತ್ತೊಬ್ಬರಿಗೆ ನೀಡಬಹುದು” ಎಂಬ ಮಾತು ಈಗ ಹಲವರ ನಡುವೆ ಚರ್ಚೆಯಾಗುತ್ತಿದೆ.
ಸಾರ್ವಜನಿಕರ ಅಭಿಪ್ರಾಯ ಏನೆಂದರೆ, ಸರ್ಕಾರಿ ಆಸ್ಪತ್ರೆಗಳನ್ನು ದುರ್ಬಲಗೊಳಿಸುವ ಬದಲು ವೈದ್ಯರು, ಸಿಬ್ಬಂದಿ, ಔಷಧಿ ಮತ್ತು ಮೂಲಸೌಕರ್ಯಗಳನ್ನು ಹೆಚ್ಚಿಸಿ ಇನ್ನಷ್ಟು ಬಲಪಡಿಸಬೇಕು. ಆರೋಗ್ಯ ಸೇವೆ ಹಕ್ಕಾಗಿರಬೇಕು, ವ್ಯಾಪಾರವಾಗಬಾರದು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.


