ಲಾಂಗ್‌ಜಂಪ್‌ನಲ್ಲಿ ಸಾಧನೆಗೈದ ಸುಹಾನ್ ರೈ ರಾಷ್ಟ್ರಮಟ್ಟಕ್ಕೆ ಆಯ್ಕೆ.

ಪುತ್ತೂರು: ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತದ ರಾಜ್ಯಗಳ ಕ್ರೀಡಾಕೂಟದ ಲಾಂಗ್‌ಜಂಪ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಪಡೆದಿರುವ ಒಳಮೊಗ್ರು ಗ್ರಾಮದ ಕುಂಬ್ರ ಕುರಿಕ್ಕಾರದ ಕೆ. ಸುಹಾನ್ ಎನ್. ರೈ ಅವರು ಮುಂದೆ ಉತ್ತರ ಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ಇವರು ಪುತ್ತೂರಿನ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾರೆ. ಸುಹಾನ್ ಅವರು ಕುಂಬ್ರದ ಕುರಿಕ್ಕಾರ ನೇಮಿರಾಜ್ ರೈ ಹಾಗೂ ಪ್ರೀತಾ ಎನ್. ರೈರವರ ಪುತ್ರ. ಸಾಧಕ ವಿದ್ಯಾರ್ಥಿ ಸುಹಾನ್‌ಗೆ ‘ಮೇಜ‌ರ್ ವೆಂಕಟರಾಮಯ್ಯ ಅಥ್ಲೆಟಿಕ್ಸ್ ಪುತ್ತೂರು’ ತರಬೇತಿ ಸಂಸ್ಥೆಯ ತರಬೇತುದಾರರಾದ ಶ್ರೀನಿಧಿ ಆರ್ಯಾಪು ಅವರು ಮಾರ್ಗದರ್ಶನ ಹಾಗೂ ವಿಶೇಷ ತರಬೇತಿ ನೀಡಿದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟು ಕೆ. ಸುಹಾನ್ ಎನ್. ರೈ ಅವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿ ಶುಭಹಾರೈಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *