
ಕಡಿಮೆ ಹಣದಲ್ಲಿ ದೊಡ್ಡ ಕನಸು ತೋರಿಸಿ ಜನರನ್ನು ಸೆಳೆಯುವ scam ಜಾಲಗಳು ಈಗ ಗ್ರಾಮಗಳಿಂದ ನಗರಗಳವರೆಗೆ ಹರಡುತ್ತಿವೆ. ಆರಂಭದಲ್ಲಿ “golden period” ಹೆಸರಿನಲ್ಲಿ ಕೆಲವರಿಗೆ ಸಣ್ಣ gift, cashback ಅಥವಾ ಹಣ ನೀಡಿ ನಂಬಿಕೆ ಮೂಡಿಸಲಾಗುತ್ತದೆ. ನಂತರ ಸಾವಿರಾರು ಜನರಿಂದ ಹಣ ಸಂಗ್ರಹಿಸಿ, ಕೊನೆಗೆ group admin, office, mobile number ಎಲ್ಲವೂ ಮಾಯವಾಗುವ ಪ್ರಕರಣಗಳು ಹೆಚ್ಚುತ್ತಿವೆ.
ಮೋಸ ಗೊತ್ತಾದ ಕೂಡಲೇ “ಹೋಗಲಿ ₹500 ಮಾತ್ರ” ಎಂದು ಮೌನವಾಗಿರುವುದು ದೊಡ್ಡ ತಪ್ಪು ಎಂದು ತಜ್ಞರು ಎಚ್ಚರಿಸಿದ್ದಾರೆ. ಇಂದು ₹500, ನಾಳೆ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು.
ಜನರು ತಕ್ಷಣ ಮಾಡಬೇಕಾದ ಕ್ರಮಗಳು:
- ಹಣ ಕಳಿಸಿದ UPI screenshot, bank statement, WhatsApp chat, voice record, receipt ಎಲ್ಲವನ್ನು ಸುರಕ್ಷಿತವಾಗಿ save ಮಾಡಬೇಕು.
- ಮೋಸಗಾರರ mobile number, QR code, account details delete ಮಾಡದೇ evidence ಆಗಿ ಇಟ್ಟುಕೊಳ್ಳಬೇಕು.
- Bank ಹಾಗೂ payment appಗೆ ತಕ್ಷಣ complaint ನೀಡಿ account freeze ಮಾಡುವಂತೆ ಮನವಿ ಮಾಡಬೇಕು.
- ಹತ್ತಿರದ ಪೊಲೀಸ್ ಠಾಣೆ ಹಾಗೂ cyber crime portalಗೆ ಅಧಿಕೃತ ದೂರು ನೀಡಬೇಕು.
- “refund ಕೊಡ್ತೀವಿ” ಎಂದು ಮತ್ತೆ processing fee ಕೇಳಿದರೆ ಒಂದು ರೂಪಾಯಿಯೂ ಕಳುಹಿಸಬಾರದು.
ಸಾಮಾಜಿಕ ಕಾರ್ಯಕರ್ತರ ಪ್ರಕಾರ, ಇಂತಹ scamಗಳು ಜನರ ದುಡಿಯುವ ಹಣ, ಭರವಸೆ ಮತ್ತು ಭವಿಷ್ಯವನ್ನು ದೋಚುತ್ತಿವೆ. “ಕಾರು ಕೊಡ್ತೀವಿ, ಗೋಲ್ಡ್ ಕೊಡ್ತೀವಿ” ಎನ್ನುವ ಆಮಿಷದ ಹಿಂದೆ organized fraud network ಕಾರ್ಯನಿರ್ವಹಿಸುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಲಾಗಿದೆ.
Cyber Crime Complaint Portal:
National Cyber Crime Reporting Portal


