ಮಾಣಿ – ಸಂಪಾಜೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ರಾ.ಹೆದ್ದಾರಿ ಪ್ರಾದೇಶಿಕ ಅಧಿಕಾರಿ ಜೊತೆ ಶಾಸಕ ರೈ ಮಾತುಕತೆ

ಬೆಂಗಳೂರು: ಮಾಣಿ – ಸಂಪಾಜೆ ಚತುಷ್ಪಥ ರಾ.ಹೆದ್ದಾರಿ 275 ರ ಕಾಮಗಾರಿಗೆ ಡಿಪಿಆರ್ ಮುಗಿದಿದ್ದು ವಾರ್ಷಿಕ ಯೋಜನೆಯಲ್ಲಿ ಹೆದ್ದಾರಿಯನ್ನು ಸೇರ್ಪಡೆಗೊಳಿಸಿ‌ಕಾಮಗಾರಿ ಆರಂಭ ಮಾಡುವಂತೆ ಎನ್‌ಎಚ್ ರೀಜನಲ್ ಆಫೀಸರ್ ನರೇಂದ್ರ ಶರ್ಮ ಅವರಿಗೆ ಶಾಸಕ ಅಶೋಕ್ ರೈ ವಿನಂತಿಸಿದ್ದಾರೆ.
ಬುಧವಾರ ಎನ್‌ಎಚ್ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ‌ ನರೇಂದ್ರ ಶರ್ಮಾ ಅವರ ಜೊತೆ ಮಾತುಕತೆ ನಡೆಸಿದ ಶಾಸಕರು‌ ಡಿಪಿಆರ್ ಮಾಡಿಸಲು ಕರ್ನಾಟಕ ಲೋಕೋಪಯೋಗಿ ಇಲಾಖೆಯಿಂದ 3.10 ಕೋಟಿ‌ ಅನುದಾನ ಬಿಡುಗಡೆಯಾಗಿ ಡಿಪಿಆರ್ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ.‌ ಇನ್ನು‌ ಕಾಮಗಾರಿ‌ ಆರಂಭವಾಗಬೇಕಾದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ‌ ಈ ಯೋಜನೆಯನ್ನು ಸೇರಿಸಿಕೊಳ್ಳುವ ಮೂಲಕ ಕಾಮಗಾರಿ‌ಸ್ಪೀಡಪ್ ಮಾಡಬೇಕೆಂದು‌ ಮನವಿ ಮಾಡಿದರು.

ಮಾಣಿಯಿಂದ ಸಂಪಾಜೆ‌ತನಕ ಚತುಷ್ಫಥ ಹೆದ್ದಾರಿಯಾದಲ್ಲಿ ಈ ಭಾಗ ಅಭಿವೃದ್ದಿಯಾಗಲಿದೆ. ಈ ಹಿಂದೆಯೇ ಇದು ಆಗಬೇಕಿತ್ತು.‌ ಚತುಷ್ಪಥ ಹೆದ್ದಾರಿಯನ್ನಾಗಿ ರೂಪಿಸಬೇಕು‌ಎಂಬ ನಿಟ್ಟಿನಲ್ಲಿ‌ಈಗಾಗಲೇ ಹಲವು ಬಾರಿ ಸಂಬಂದಪಟ್ಟ ಅಧಿಕಾರಿಗಳನ್ನು ಭೇಟಿಯಾಗಿದ್ದೇನೆ. ರಾಜ್ಯ ಸರಕಾರ ಡಿಪಿಆರ್ ಮಾಡಿಸಲಯ ಅನುದಾನವನ್ನು ಬಿಡುಗಡೆ ಮಾಡಿದೆ. ಕಾಮಗಾರಿ ವಿಳಂಬವಾಗಬಾರದು, ಆದಷ್ಟು‌ಶೀಘ್ರ ಕಾಮಗಾರಿ‌ನಡೆದು ಈ ಭಾಗದ‌ಜನರ ಬಹುಕಾಲದ‌ ಕನಸು‌ ನನಸಾಗಬೇಕು ಎಂದು ಹೇಳಿದರು.

News Editor

Learn More →

Leave a Reply

Your email address will not be published. Required fields are marked *