ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಬಿಜೆಪಿಗರು ಹಳ್ಳಿಯಿಂದ ದಿಲ್ಲಿಯವರೆಗೂ ಹೇಳಿಕೊಂಡು ತಿರುಗುತ್ತಾರೆ – ಕಡಬ ಪ.ಪಂ ಚುನಾವಣೆಯ ಕಾಂಗ್ರೆಸ್ ಉಸ್ತುವಾರಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ

ಪುತ್ತೂರು: ಕಡಬ ಪಟ್ಟಣ ಪಂಚಾಯಿತಿಯ ಕಳಾರ ವಾರ್ಡ್-1ರಲ್ಲಿ ಬಿಜೆಪಿ ಅಭ್ಯರ್ಥಿ ಒಂದೇ ಒಂದು ಮತ ಪಡೆಯಲು ವಿಫಲವಾಗಿ ಶೂನ್ಯ ಸಂಪಾದನೆ ಮಾಡಿದ್ದು, ರಾಷ್ಟೀಯ ಪಕ್ಷವಾದ ಬಿಜೆಪಿಗೆ ತೀವ್ರ ಮುಖಭಂಗ ಉಂಟು ಮಾಡಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಒಂದು ಕಡೆ ಬಿಜೆಪಿಗರು ಹಳ್ಳಿಯಿಂದ ದಿಲ್ಲಿಯವರೆಗೂ ಹೇಳಿಕೊಂಡು ತಿರುಗುತ್ತಾರೆ. ಆದರೆ ಇಲ್ಲಿಯವರೆಗೆ ಎಲ್ಲೂ ಕೂಡ ಕಾಂಗ್ರೆಸ್ ಸೊನ್ನೆ ಸುತ್ತಿದ ಉದಾಹರಣೆಯಿಲ್ಲ. ಕಡಬದಲ್ಲಿ ಬಿಜೆಪಿ ಮಾಡಿದ ಶೂನ್ಯ ಸಂಪಾದನೆ ದಾಖಲೆಯ ಸೋಲು ಎಂದು ಕಡಬ ಪಪಂ ಚುನಾವಣೆಯ ಕಾಂಗ್ರೆಸ್ ಉಸ್ತುವಾರಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಾರ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ತಮನ್ನಾ ಜಬಿನ್ 201 ಮತ ಗಳಿಸಿದ್ದಾರೆ. ಎಸ್‍ಡಿಪಿಐ ಅಭ್ಯರ್ಥಿ ಸಮೀರಾ 74 ಮತ ಗಳಿಸಿದ್ದಾರೆ. ಪಕ್ಷೇತರ ಜೈನಾಬಿ 139 ಮತ ಗಳಿಸಿದ್ದಾರೆ.

ಬಿಜೆಪಿಯ ಪ್ರೇಮಾ ಒಂದೇ ಒಂದು ಮತ ಗಳಿಸದೆ ಸೊನ್ನೆ ಸುತ್ತಿದ್ದಾರೆ. ಪ್ರೇಮಾ ಈ ವಾರ್ಡ್‍ನ ಮತದಾರರಲ್ಲದ ಕಾರಣ ಅವರು ಮತ್ತು ಅವರ ಮನೆಯವರ ಮತಗಳು ಸಿಗದೇ ಇರಬಹುದು. ಆದರೆ ಬೂತ್‍ನ ಬಿಜೆಪಿ ಅಧ್ಯಕ್ಷರು ಮತ್ತು ಅಭ್ಯರ್ಥಿಯ ಸೂಚಕರು ಕೂಡ ತಮ್ಮ ಪಕ್ಷಕ್ಕೆ ಮತ ನೀಡಿಲ್ಲವೇ? ಇದೆಂಥ ವಿಪರ್ಯಾಸ? ಒಂದು ವೇಳೆ ಬಿಜೆಪಿಯವರು ಇಲ್ಲಿ ಬೇರೆ ಅಭ್ಯರ್ಥಿಗೆ ಬೆಂಬಲ ನೀಡಿದ್ದೇ ಆಗಿದ್ದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಕಣಕ್ಕಿಳಿಸಿದ್ದು ಯಾಕೆ? ಬೇರೆ ಅಭ್ಯರ್ಥಿಗೆ ಬೆಂಬಲ ನೀಡುವುದೇ ಆಗಿದ್ದಲ್ಲಿ ಅದನ್ನು ಬಹಿರಂಗವಾಗಿ ಘೋಷಿಸಬಹುದಿತ್ತಲ್ಲವೇ? ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಹೇಳಿಕೊಂಡವರಿಗೆ ಇದೆಂಥ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ ಯಾವತ್ತೂ ಇನ್ನೊಂದು ಪಕ್ಷವನ್ನು ಮುಕ್ತ ಮಾಡುತ್ತೇವೆ ಎಂದು ಹೇಳಿಲ್ಲ. ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷದಷ್ಟೇ ಮಹತ್ವ ಪ್ರತಿಪಕ್ಷಕ್ಕೂ ಇದೆ ಎಂದರು.
ವಾರ್ಡ್ ನಂಬರ್ 5ರ ಮಾಲೇಶ್ವರದಲ್ಲಿ ಒಟ್ಟು 637 ಮತಗಳಿದ್ದು, ಇದರಲ್ಲಿ ಅಲ್ಪಸಂಖ್ಯಾತರ ಮತಗಳು 110. ಇಲ್ಲಿ ಕಾಂಗ್ರೆಸ್‍ನ ಹನೀಫ್ ಬಿಜೆಪಿಯ ಪ್ರಕಾಶ್‍ರನ್ನು 84 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ 2 ವಾರ್ಡ್‍ಗಳ ಫಲಿತಾಂಶ ಮತ್ತು ಒಟ್ಟಾರೆ ಕಡಬ ಪಂಪಂ ಫಲಿತಾಂಶ ನೋಡಿದರೆ ಬಿಜೆಪಿಯ ಕೋಮುವಾದವನ್ನು ಮತದಾರರು ಸೋಲಿಸಿದ್ದಾರೆ ಎಂದರು.

13 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 8 ಸ್ಥಾನ ಪಡೆದು ಮೊಟ್ಟ ಮೊದಲ ಬಾರಿಗೆ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗದ್ದುಗೆ ಹಿಡಿದಿದೆ. ಕಾಂಗ್ರೆಸ್‍ನ ಸಂಘಟಿತ ಹೋರಾಟ, ಅಭ್ಯರ್ಥಿಗಳ ಆಯ್ಕೆಯಲ್ಲಿ ಮೂಡಿದ ಸಹಮತ ಮತ್ತು ರಾಜ್ಯ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಈ ಗೆಲುವು ನಮಗೆ ಸಿಕ್ಕಿದೆ. ಸರಕಾರದ 5 ಗ್ಯಾರಂಟಿಗಳು ಜನರ ಬದುಕಿನ ದಿಕ್ಕನ್ನೇ ಬದಲಿಸಿದೆ. ಹೀಗಾಗಿ ಜನ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿರುವ ಕಾರಣ ಕಡಬಕ್ಕೆ ಹೆಚ್ಚಿನ ಅನುದಾನ ತರಲು ಸಾಧ್ಯವಾಗಲಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಪಕ್ಷದ ಮುಖಂಡರಾದ ನಿರ್ಮಲ್ ಕುಮಾರ್ ಜೈನ್, ಬಶೀರ್ ಮಠ ಮತ್ತು ಉಲ್ಲಾಸ್ ಕೋಟ್ಯಾನ್ ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ತೆರಿಗೆ ಹಣದಲ್ಲಿ ರಸ್ತೆ… ರಾಜಕೀಯ ಫೋಟೋಶೂಟ್ ಯಾಕೆ?
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಶಿರೂರು ಶಾಲೆಯಲ್ಲಿ SSLC ರಿಸಲ್ಟ್ ಚಮತ್ಕಾರ ಗುರುಚರಣಕ್ಕೆ ಶಿರಬಾಗಿದ ಶಾಸಕ ಗುರುರಾಜ್ ಗಂಟಿಹೊಳೆ ; ಕಠಿಣ ಶ್ರಮಕ್ಕೆ ಒಲಿದ ‘ಫಲಿತಾಂಶ’ದ ಭಾಗ್ಯ!
1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”