ಆರ್‌ಎಸ್ಎಸ್, ಬಿಜೆಪಿ, ದಳ ಬಗ್ಗೆ ತಿಳಿದುಕೊಂಡಿದ್ದೇನೆ. ರಿಸರ್ಚ್ ಮಾಡ್ತಾ ಇರ್ತೀನಿ, ಎಲ್ಲವನ್ನೂ ಗ್ರಾಬ್ ಮಾಡಬೇಕು ಅಲ್ವಾ. ಕೆಲವನ್ನು ಯೋಚನೆ ಮಾಡಿ ನೋಡ್ತಿರಬೇಕು ಎಂದು ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬಿಜೆಪಿ ಧರ್ಮ ರಕ್ಷಣಾ ಅಭಿಯಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅದು ಠುಸ್ ಗಿರಾಕಿ, ಅವರು ಮಾಡ್ತಿರುವುದು ರಾಜಕಾರಣ. ನಮ್ಮ ಸರ್ಕಾರ ಮೊಹಂತಿ, ಅವರ ತಂಡ ಕ್ಲೀನ್ ಆಗಿ ಕೆಲಸ ಮಾಡ್ತಿದ್ದಾರೆ.
ಬಿಜೆಪಿ ರಾಷ್ಟ್ರೀಯ ನಾಯಕ ಬಿ.ಎಲ್ ಸಂತೋಷ್ ಬಗ್ಗೆ ಮಾತನಾಡಿದ್ದಕ್ಕೆ ಮಹೇಶ್ ಶೆಟ್ಟಿ ತಿಮರೋಡಿಯ ಬಂಧನ ಆಗಿದೆ. ಅವರ ಬಳಿ ಏನು ದಾಖಲೆ ಇದೆ?. ನಮ್ಮ ವಿರೋಧಿಗಳ ಬಗ್ಗೆ ಮಾತನಾಡ್ತಾರೆಂದು ಖುಷಿ ಪಡುವುದಲ್ಲ. ಮೊನ್ನೆ ಸಿಎಂ ಬಗ್ಗೆ ಮಾತನಾಡಿದ್ರು, ನಾಳೆ ನಮ್ಮ ಬಗ್ಗೆಯೂ ಮಾತನಾಡುತ್ತಾರೆ. ಅವರ ದಾಖಲೆ ಇದ್ರೆ ಮಾತನಾಡಲಿ, ಆಧಾರ ಇಟ್ಟು ಮಾತನಾಡಬೇಕು ಎಂದು ಹೇಳಿದರು.
ಧರ್ಮಸ್ಥಳದ ಹುಂಡಿ ಹಣ ಎಣಿಕೆ ಆಗಬೇಕೆಂಬ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, ಆದಾಯ ತೆರಿಗೆ ಇಲಾಖೆ ಇದೆ. ನಾವು ನೀವಲ್ಲ ಎಂದು ಹೇಳಿದರು.


