ಆಡಳಿತ ಮೊಕ್ತೇಸರರಿಗೆ ದೇವಸ್ಥಾನಕ್ಕೆ ಪ್ರವೇಶ ನಿಷೇಧ

ಹೆಬ್ರಿ: ಹೆಬ್ರಿ ಸೀತನಾದಿ ಬಳಿಯ ದೇವಸ್ಥಾನದ ಪ್ರವೇಶಕ್ಕೆ ಅಡ್ಡಿ ಪಡಿಸಿದ ಘಟನೆ ವರದಿ ಆಗಿದೆ.

ಸುಪ್ರೀತ್ (32), ಚಾಂತಾರು ಗ್ರಾಮ ಬ್ರಹ್ಮಾವರ ಇವರ ಅಜ್ಜಿ ಮನೋರಮಾ ರವರು ನಾಡ್ಪಾಲು ಗ್ರಾಮದ ನಂದಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರಾಗಿರುತ್ತಾರೆ. ಅವರು ಹಾಗೂ ಅವರ ಮನೆಯವರು ದಿನಾಂಕ 12/08/2025 ರಂದು ಮದ್ಯಾಹ್ನ ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮದ ಸೀತಾನದಿ ನಂದಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಹೋಗಲು ಆವರಣದಲ್ಲಿ ಕಾರಿನಲ್ಲಿ ಕುಳಿತುಕೊಂಡಿರುವಾಗ ವಿಜಯ ಮತ್ತು ಅವರ ಜೊತೆ ಇರುವ ಕೆಲವರು ಬಳಿ ಬಂದು ಕಾರನ್ನು ತಡೆದು ಜೀವ ಬೆದರಿಕೆ ಹಾಕಿ ದೇವಸ್ಥಾನದ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.

ಅವರು ಈ ಹಿಂದೆ ಕೂಡಾ ದೇವಸ್ಥಾನದ ವಿಚಾರದಲ್ಲಿ ಬೆದರಿಕೆ ಹಾಕಿರುತ್ತಾರೆ. ಅವರು ತನ್ನ ಕುಟುಂಬಕ್ಕೆ ಹಾನಿ ಉಂಟು ಮಾಡಬಹುದಾಗಿ ಎಂದು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

News Editor

Learn More →

Leave a Reply

Your email address will not be published. Required fields are marked *