ಅಪ್ರಾಪ್ತೆಯೊಬ್ಬಳು ತಾಯಿಯಾಗಿ ಹೆರಿಗೆ ವೇಳೆ ಮಗು ಸಾವು

ಸುಬ್ರಮಣ್ಯ: ಸಂಬಂಧಿಯಿಂದಲೇ ಅಪ್ರಾಪ್ತೆಯೊಬ್ಬಳು ತಾಯಿಯಾಗಿ ಹೆರಿಗೆ ವೇಳೆ ಮಗು ಸಾವನ್ನಪ್ಪಿರುವ ಘಟನೆ ಸುಬ್ರಮಣ್ಯದಲ್ಲಿ ನಡೆದಿದೆ.

ಕೊಲ್ಲಮೊಗ್ರದ ಅಪ್ರಾಪ್ತೆ ಮೇಲೆ ಆಕೆಯ ಚಿಕ್ಕಮ್ಮನ ಮಗ ಲೈಂಗಿಕ ದೌರ್ಜನ್ಯವೆಸಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.

ಬಾಲಕಿಗೆ ಹೊಟ್ಟೆನೋವು ಎಂದು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಗರ್ಭಿಣಿ ಅನ್ನೋದು ಗೊತ್ತಾಗಿದೆ. ಬಾಲಕಿಗೆ 9 ತಿಂಗಳು ತುಂಬಿದ ಹಿನ್ನೆಲೆ ಹೆರಿಗೆಯಾಗಿದ್ದು, ಈ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎನ್ನಲಾಗಿದೆ. ಆರೋಪಿ ವಿರುದ್ಧ ಈಗಾಗಲೇ ಪೋಕ್ಸೋ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

News Editor

Learn More →

Leave a Reply

Your email address will not be published. Required fields are marked *