ಪುತ್ತೂರು: ಮತ ಕಳ್ಳತನದಲ್ಲಿ ಚುನಾವಣಾ ಆಯೋಗ ಮತ್ತು ಬಿಜೆಪಿ ಕೈಜೋಡಿಸಿ ದೇಶಕ್ಕೆ ಮತ್ತು ದೇಶದ ಪ್ರಜಾಪ್ರಭುತ್ವಕ್ಕೆ ದ್ರೋಹವನ್ನು ಎಸೆಗಿದೆ. ಅಕ್ರಮ ಮತದಾರರ ಪಟ್ಟಿ ತಯಾರಿಸುವಲ್ಲಿ ಇಬ್ಬರೂ ಶಾಮೀಲಾಗಿರುವ ಕಾರಣ ಇಬ್ಬರೂ ಒಂದೇ ಹೇಳಿಕೆ ನೀಡುತ್ತಿದ್ದಾರೆ. ಸಾವಿಂಧಾನಿಕ ವ್ಯವಸ್ಥೆ ದುರ್ಬಲವಾಗಿರುವ ಕಾರಣವೇ ಪ್ರಶ್ನೆಯನ್ನು ಎತ್ತಲಾಗಿದೆ. ನೈತಿಕತೆ ಇದ್ದರೆ, ಅಕ್ರಮವನ್ನು ನಡೆಸಿ ಅಧಿಕಾರ ಗಳಿಸಿಕೊಂಡವರು ರಾಜೀನಾಮ ನೀಡಿ ಹೊಸ ಜನಾದೇಶಕ್ಕೆ ಹೋಗಬೇಕು ಎಂದು ಕೆ.ಪಿ.ಸಿ.ಸಿ. ವಕ್ತಾರ ಅಮಳ ರಾಮಚಂದ್ರ ಆಗ್ರಹಿಸಿದರು.
ದೇಶದ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಕೈವಶದಲ್ಲಿಟ್ಟುಕೊಂಡು ಜನಾಧಿಪತ್ಯವನ್ನು ಅತಿಕ್ರಮಿಸುತ್ತಿರುವ ಕೇಂದ್ರದ ನರೇಂದ್ರ ಮೋದಿ ನೇತತ್ವದ ಸರ್ಕಾರ ಚುನಾವಣಾ ಆಯೋಗದ ಮುಖ್ಯಸ್ಥರ ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಮಾಡಿದೆ. ಹಳೆಯ ಪದ್ಧತಿಯಲ್ಲಿ ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನು ನೇಮಿಸುವ ಸಮಿತಿಯಲ್ಲಿ ದೇಶದ ಪ್ರಧಾನ ಮಂತ್ರಿ, ಗೃಹಮಂತ್ರಿ, ವಿರೋಧ ಪಕ್ಷದ ನಾಯಕರು ಮತ್ತು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರು ಇದ್ದರು. ಈಗ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ಹೊರಗಿಟ್ಟಿದೆ. ಚುನಾವಣಾ ಆಯೋಗವೇ ನೀಡಿದ ದಾಖಲೆಯನ್ನೇ ರಾಹುಲ್ ಗಾಂಧಿ ಆರೋಪಿಸುವಾಗ ತೋರಿಸಿದ್ದು, ಅವರದ್ದೇ ದಾಖಲೆಗೆ ಇನ್ನೇನು ಆಧಾರ ನೀಡಬಾಗಿದೆ. ತಪ್ಪುಗಳನ್ನು ಮಾಡಿದ ಚುನಾವಣಾ ಆಯೋಗ ಕ್ಷಮೆಯನ್ನು ನೀಡಬೇಕು ಹೊರತು ರಾಹುಲ್ ಗಾಂಧಿ ಯಾಕೆ ಕೇಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ನೀಡಲಾದ ಉದಾಹರಣೆಗಳು ಸುಳ್ಳಾ? ಸಿಬಿಐ, ಇಡಿ, ಚುನಾವಣಾ ಆಯೋಗ ದುರಪಯೋಗ ಪಡಿಸಿಕೊಳ್ಳಲಾಗಿದ್ದು, ಕಳ್ಳನಿಗೆ ದೂರು ಕೊಡುವ ಉದ್ದೇಶವೇನು? ಸ್ವತಂತ್ರ ತನಿಖಾ ಸಂಸ್ಥೆಯನ್ನು ಮಾಡಿ ಅಕ್ರಮವನ್ನು ತನಿಖೆ ನಡೆಸಬೇಕು. ಅಕ್ರಮ ಮತ ಚಲಾವಣೆಯ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಬೇಕಾಗಿದೆ. ಚುನಾವಣಾ ಆಯೋಗದ ಮುಖ್ಯಸ್ಥರು ರಾಜೀನಾಮೆಯನ್ನು ನೀಡಿ ಮನೆಗೆ ತೆರಳಿ ಸೂಕ್ತ ತನಿಖೆಯನ್ನು ಎದುರಿಸಬೇಕು ಎಂದು ಹೇಳಿದರು.
ಪ್ರಮುಖರಾದ ರವಿಪ್ರಸಾದ್ ಶೆಟ್ಟಿ, ರವೀಂದ್ರ ನೆಕ್ಕಿಲು, ನಿಹಾಲ್ ಶೆಟ್ಟಿ, ಚಂದ್ರ ಪ್ರಭಾ ಉಪಸ್ಥಿತರಿದ್ದರು.