ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ ಆರೋಪಿ ಬಂಧನ

ಬೆಳ್ತಂಗಡಿ: ಬಾಲಕಿಯನ್ನು ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿ ಪುದುವೆಟ್ಟು ಗ್ರಾಮದ ಮೇಲ್ಮಡ್ಕ ನಿವಾಸಿ , ಚಾಲಕ ವೃತ್ತಿ ಮಾಡುತ್ತಿದ್ದ ದಿನೇಶ್‌ ಗೌಡ (೩೦) ನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರ ಎಸಗಿ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ. ಕೆಲವು ದಿನಗಳ ನಂತರ ಹೊಟ್ಟೆನೋವು ಎಂದು ಮನೆಯವರ ಬಳಿ ತಿಳಿಸಿದಾಗ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡುವಾಗ ಗರ್ಭಿಣಿಯಾಗಿರುವ ವಿಚಾರ ತಿಳಿದು ಬಂದಿದೆ.

ಹುಡುಗಿಯ ಪೋಷಕರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪುದುವೆಟ್ಟು ಗ್ರಾಮದ ಮೇಲ್ಮಡ್ಕ ನಿವಾಸಿ ದಿನೇಶ್ ಗೌಡ (30) ಎಂಬಾತನಾನು ವಿರುದ್ಧ ಪ್ರಕರಣ ದಾಖಲಿಸಿ ಬಳಿಕ ವಿಚಾರಣೆ ನಡೆಸಿ ಬಳಿಕ ಪೊಲೀಸರು ಬಂಧಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *