ಮಂಗಳೂರಿನಲ್ಲಿ ಸುಳ್ಳು ಸುದ್ದಿ ಸೃಷ್ಟಿಸಿದ ಆಟೋ ಚಾಲಕ

ಮಂಗಳೂರು: ಆಟೋ ಚಾಲಕನ ಮೇಲೆ ನಗರದ ಫಳ್ನೀರ್ ನಲ್ಲಿ ತಂಡವೊಂದು ಹಲ್ಲೆ ನಡೆಸಿದೆ ಎಂಬುದು ಸುಳ್ಳು, ಇದು ಆಟೋ ಚಾಲಕನೇ ಸೃಷ್ಟಿಸಿದ ಕಟ್ಟು ಕಥೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಆ. 31ರಂದು ರಾತ್ರಿ ನಗರದ ಫಳ್ನೀರ್ ನಲ್ಲಿ ತಂಡವೊಂದು ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಆಟೋ ಚಾಲಕ ಬಶೀರ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದ.ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದಾಗ ಅಲ್ಲಿ ಅಂತಹ ಘಟನೆ ನಡೆದಿಲ್ಲ. ಚಾಲಕನೇ ಸಾರ್ವಜನಿಕರ ಗಮನ ಸೆಳೆಯಲು ಈ ಕೃತ್ಯ ನಡೆಸಿದ್ದು, ಯಾವುದೋ ಹರಿತವಾದ ವಸ್ತುವಿನಿಂದ ಅಥವಾ ಪೆನ್ ನಿಂದ ತನ್ನ ದೇಹಕ್ಕೆ ಚುಚ್ಚಿ ಕೊಂಡು ಹಲ್ಲೆ ಪ್ರಕರಣವನ್ನು ಸೃಷ್ಟಿಸಿದ್ದಾನೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *