
ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ 12ನೇ ದಿನವೂ ಶೋಧಕಾರ್ಯ ಮುಂದುವರಿದಿದೆ. ದೂರುದಾರ ತೋರಿಸಿದ ಜಾಗ ಅಗೆಯಲು ಎಸ್ಐಟಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.
ಧರ್ಮಸ್ಥಳದಲ್ಲಿ ಅಸ್ತಿ ಪಂಜರ ಶೋಧ ಕೇಸ್ ಗೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ರತ್ನಗಿರಿ ಬಳಿಕ ಇಂದು ಕನ್ಯಾಡಿಯಲ್ಲಿ ಶೋಧ ಕಾರ್ಯ, ನಡೆಸಲಾಗುತ್ತದೆ. ಹೀಗಾಗಿ ತೀವ್ರ ಕುತೂಹಲ ಕೆರಳಿಸಿದೆ. ದೂರುದಾರ ಹೇಳಿದಂತೆ ಸ್ಥಳ ತೋರಿಸಿದ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳ ತಂಡ ಕಾರ್ಯಾಚರಣೆ ಮಾಡಲು ನಡೆಸುತ್ತಿದೆ..
ಧರ್ಮಸ್ಥಳದಲ್ಲಿ ಅಸ್ತಿಪಂಜರ ಶೋಧ ಕಾರ್ಯಕ್ಕೆ ಎಸ್ಐಟಿ ಹೊಸ ಪ್ಲಾನ್ ಮಾಡಿದ್ದು ದೂರುದಾರ ತೋರಿಸಿದ ಎಲ್ಲಾ ಸ್ಪಾಟ್ ಜಾಗ ಪಾಯಿಂಟ್ ಮಾಡದೆ ಎಸ್ಐಟಿ ಅಧಿಕಾರಿಗಳು ಅಗೆಯಲು ನಿರ್ಧರಿಸಿದ್ದಾರೆ. ಆತ ಹೇಳಿದ ಸ್ಥಳಕ್ಕೆ ನೇರವಾಗಿ ಹೋಗಿ SIT ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳುತ್ತಾರೆ.


