ಮಂಗಳೂರು : ಬಂಟ್ವಾಳ ತಾಲೂಕಿನ ಅಮ್ಮೆಮಾರ್ ನಲ್ಲಿ ನಡುರಾತ್ರಿ ರೌಡಿಶೀಟರ್​ಗಳ ತಲ್ವಾರ್ ವಾರ್,ವಿಡಿಯೋ ವೈರಲ್.

ಮಂಗಳೂರು : ಜಿಲ್ಲೆಯಲ್ಲಿ ಮತ್ತೊಮ್ಮೆ ತಲ್ವಾರ್ ವಾರ್ ನಡೆದಿದೆ. ದ‌ಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮೆಮಾರ್ ಎಂಬಲ್ಲಿ ಎರಡು ಗುಂಪಿನ ಯುವಕರು ತಲ್ವಾರ್​ನಿಂದ ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್​ ಆಗಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.



ತಸ್ಲೀಮ್ ಹಾಗೂ ಆತನ ಸ್ನೇಹಿತರು ಮಾತನಾಡುತ್ತ ನಿಂತಿದ್ದರು. ಈ ತಸ್ಲೀಮ್​ಗೆ ಕರೆಯೊಂದು ಬಂದಿತ್ತು. ಫೋನ್​ನಲ್ಲಿ ತಸ್ಲೀಮ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಮ್ಮೆಮಾರ್ ಶಾಲೆ ಬಳಿ ಬರುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ತಸ್ಲೀಮ್ ಹಾಗೂ ತಂಡ ಅಮ್ಮೆಮಾರ್ ಶಾಲೆ ಬಳಿಗೆ ಹೋದಾಗ ಆರೋಪಿ ಮನ್ಸೂರ್ ಹಾಗೂ ಇತರರು ತಲ್ವಾರ್​ನಿಂದ ದಾಳಿ ಮಾಡಿದ್ದಾರೆ.

ಪಲ್ಟಿ ಇಮ್ರಾನ್ ತಂಡದಿಂದ ದಾಳಿ ನಡೆದಿದ್ದು ಹಳೇ ದ್ವೇಷದಿಂದ ಕರೆಸಿ ತಲವಾರಿನಿಂದ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನ್ಸೂರ್,ಮುಸ್ತಾಕ ಯಾನೆ ಮಿಚ್ಚ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ದಾಳಿ ಮಾಡಿದ ಆರೋಪಿಗಲಾಗಿದ್ದು ತಲವಾರು ದಾಳಿಯಲ್ಲಿ ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್​ ಎಂಬುವರಿಗೆ ಗಂಭೀರ ಗಾಯವಾಗಿದೆ. ಬಂಟ್ವಾಳ ‌ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ.

News Editor

Learn More →

Leave a Reply

Your email address will not be published. Required fields are marked *