
ಆ.17; ಕಲ್ಲಾರೆಯಲ್ಲಿ ವರಮಹಾಲಕ್ಷ್ಮಿ ಪೂಜೆ
ಪುತ್ತೂರು; ವರಲಕ್ಷ್ಮೀ ಪೂಜಾ ಸಮಿತಿ ಕಲ್ಲಾರೆ ಹಾಗೂ ವಿಶ್ವಹಿಂದೂ ಪರಿಷದ್ ಮಾತೃಮಂಡಳಿ ಆಶ್ರಯದಲ್ಲಿ ಆ.17ರಂದು ಪುತ್ತೂರು ಕಲ್ಲಾರೆಯ ಗುರುರಾಘವೇಂದ್ರ ಮಠದ ಕಲಾ ಮಂಟಪದಲ್ಲಿ 50ನೇ ವರ್ಷದ ಸಾಮೂಹಿಕ ವರಲಕ್ಷ್ಮಿಪೂಜೆ ನಡೆಯಲಿದೆ ಎಂದು ಪೂಜಾ ಸಮಿತಿ ಅಧ್ಯಕ್ಷೆ ವೀಣಾ ಕೊಳತ್ತಾಯ ಅವರು ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಪ್ರಾರಂಭದ 2 ವರ್ಷ ಲಕ್ಷ್ಮಿ ವೆಂಕಟ್ರಮಣ ದೇವಳದಲ್ಲಿ ಈ ವರಲಕ್ಷ್ಮಿ ಪೂಜಾ ಕಾರ್ಯವನ್ನು ನಡೆಸಲಾಯಿತು. ಆ ನಂತರ 2 ವರ್ಷ ಮಹಮ್ಮಾಯಿ ದೇವಸ್ಥಾನದ ಸಭಾಂಗಣದಲ್ಲಿ ಆಚರಣೆ ಮಾಡಲಾಗಿತ್ತು. ಬಳಿಕ ಕಳೆದ 45 ವರ್ಷಗಳಿಂದ ಕಲ್ಲಾರೆಯ ರಾಘವೇಂದ್ರ ಮಠದಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ. ಈ ಬಾರಿ 50 ವರ್ಷದ ಹಿನ್ನಲೆಯಲ್ಲಿ ಮೊದಲಬಾರಿಗೆ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಆ.16ರಂದು ಏಕಾದಶಿ ಆಗಿರುವ ಕಾರಣ ಸಂಜೆ 4.30ಕ್ಕ3 ಕಲಶ ಪ್ರತಿಷ್ಠೆ ಮತ್ತು ಸಂಕಲ್ಪ ಕಾರ್ಯಕ್ರಮ ನಡೆಸಲಾಗುವುದು. ಆ.17ರಂದು ಬೆಳಿಗ್ಗೆ 10.30ರಿಂದ ಪೂಜೆ ಆರಂಭವಾಗಲಿದ್ದು, ಲಲಿತಾ ಸಹಸ್ರನಾಮ ನಂತರ ಭಜನಾ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಪ್ರಸಾದವಿತರಣೆ ನಡೆಯಲಿದೆ. 11.30ಕ್ಕೆ ಪೂಜಾ ಸಮಿತಿ ಅಧ್ಯಕ್ಷೆ ವೀಣಾ ಕೊಳತ್ತಾಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಯಾಗಿ ವಿಶ್ವಹಿಂದು ಪರಿಷದ್ ದುರ್ಗಾವಾಹಿನಿ ಪ್ರಾಂತ ಸಂಯೋಜಕಿ ಸುರೇಖಾರಾಜ್ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪೂಜಾ ಸಮಿತಿ ಕಾರ್ಯದರ್ಶಿ ಪ್ರೇಮಲತಾ ರಾವ್, ಸಮಿತಿ ಪದಾಧಿಕಾರಿಗಳಾದ ಉಮಾ ಪ್ರಸನ್ನ, ವತ್ಸಲಾರಾಜ್ಞಿ, ಜಯಲಕ್ಷ್ಮಿ ಉಪಸ್ಥಿತರಿದ್ದರು.


