ಪುತ್ತೂರು: ನನ್ನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ನನ್ನ ಮೇಲೆ ಹಲ್ಲೆ ಮಾಡಿದ್ರೆ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಶಾಸಕ ಅಶೋಕ್ ರೈ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಕಂಬಳದ ರೂವಾರಿ ಶಾಸಕ ಅಶೋಕ್ ರೈ ಮೇಲೆ ಹಲ್ಲೆಗೆ ಯತ್ನ ನಡೆದಿದ್ದು, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೀರಿ ಎಂಬ ವದಂತಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅವರು, ನನ್ನ ಮೇಲೆ ಹಲ್ಲೆ ಆಗಿದ್ಯಾ?, ನನ್ನ ಮೇಲೆ ಹಲ್ಲೆ ಆಗಿರೋದು ನನಗೇ ಗೊತ್ತಿಲ್ಲ. ನಾನು ಯಾರಿಗೂ ಹಲ್ಲೆ ಮಾಡಲ್ಲ. ನನ್ನ ಮೇಲೆ ಹಲ್ಲೆ ಆಗಿಲ್ಲ. ನನಗೆ ಹಲ್ಲೆ ಮಾಡಿದರೆ ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ


