ಕಲ್ಮಡ್ಕ: ವಿದ್ಯುತ್ ಶಾಕ್ ನಿಂದ ದುರ್ಮರಣಕ್ಕೀಡಾದ ಯುವಕರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಬೆಳ್ಳಾರೆ ಪೊಲೀಸ್ ಠಾಣಾ ಮುಂಭಾಗದಲ್ಲಿ ಪ್ರತಿಭಟನೆ

ಕಲ್ಮಡ್ಕ: ವಿದ್ಯುತ್ ಶಾಕ್ ನಿಂದ ದುರ್ಮರಣಕ್ಕೀಡಾದ ಯುವಕರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ದಲಿತ ಸಂಘಟನೆಗಳಿಂದ ಬೆಳ್ಳಾರೆ ಪೊಲೀಸ್ ಠಾಣಾ ಮುಂಭಾಗದಲ್ಲಿ ಪ್ರತಿಭಟನೆ

ಸುಬ್ರಹ್ಮಣ್ಯ ಸಮೀಪ ಕಲ್ಮಡ್ಕ (ಬಿ.) ವೆಂಕಟರಮಣ ದೇವಸ್ಥಾನದ ಹತ್ತಿರ ದಲಿತ ಯುವಕರು ವಿದ್ಯುತ್ ಶಾಕ್ ನಿಂದ ಮೃತಪಟ್ಟ ಪ್ರಕರಣ – ಬೃಹತ್ ಪ್ರತಿಭಟನಾ ಸಭೆ

ಇತ್ತೀಚೆಗೆ ಕಲ್ಮಡ್ಕ ಗ್ರಾಮದ ವಳಕ್ಕರೆ ಎಂಬಲ್ಲಿ ಮೀನು ಹಿಡಿಯಲು ಹೋಗಿ ವಿದ್ಯುತ್ ಶಾಕ್ ಗೆ ಒಳಗಾಗಿ ದಾರುಣವಾಗಿ ಮೃತಪಟ್ಟ ಇಬ್ಬರು ಯುವಕರ ಕುಟುಂಬಕ್ಕೆ ಮತ್ತು ಗಾಯಗೊಂಡ ಯುವಕನಿಗೆ ವಿದ್ಯುತ್ ಸಂಪರ್ಕ ನೀಡಿದ ತೋಟದ ಮಾಲಕರಾದ ಮಧುಸೂದನ್ ಭಟ್ ವಳಕೆರೆಯವರು ಪರಿಹಾರ ನೀಡಬೇಕು ಮತ್ತು ಪ್ರಕರಣದ ಉಳಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘಟನೆಗಳು ಬೆಳ್ಳಾರೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಅ. 22ರಂದು ನಡೆದಿದೆ.

ಪ್ರಕರಣದ ಆರೋಪಿಯಲ್ಲೊಬ್ಬರಾದ ರಮೇಶ್ ಬೆಳ್ಳಪ್ಪಾಡರನ್ನು ಮೊದಲೇ ಬಂಧಿಸಿದ್ದು, ಪ್ರಮುಖ ಆರೋಪಿ ವಿದ್ಯುತ್ ಸಂಪರ್ಕ ನೀಡಿದ ತೋಟದ ಮಾಲಕರಾದ ಮಧುಸೂದನ್ ಭಟ್ಟರನ್ನು ಬಂಧಿಸಬೇಕು ಮತ್ತು ಮಧುಸೂದನ ಭಟ್ಟರು ಸೂಕ್ತ ಪರಿಹಾರ ನೀಡಬೇಕೆಂದು ಅ. 21 ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಲು ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ ನಿರ್ಧರಿಸಲಾಗಿತ್ತು. ಈ ಮಧ್ಯೆ ಮಧುಸೂದನ್ ಭಟ್ಟರು ಅ. 20ರಂದು ಬೆಳ್ಳಾರೆ ಪೊಲೀಸ್ ಠಾಣೆಗೆ ಬಂದು ಶರಣಾಗತರಾದ ಕಾರಣ ಪ್ರತಿಭಟನೆ ಶಾಂತ ರೀತಿಯಲ್ಲಿ ನಡೆಯಿತು.

ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡ್, ಪುತ್ತೂರು ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ದ.ಕ. ಜಿಲ್ಲಾ ಎಸ್.ಸಿ ಘಟಕದ ಅಧ್ಯಕ್ಷ ದಿನೇಶ್ ಮುಳೂರು, ದ.ಕ. ಜಿಲ್ಲಾ ನಲಿಕೆಯವರ ಸಂಘದ ಮಾಜಿ ಅಧ್ಯಕ್ಷರುಗಳಾದ ಪ್ರಭಾಕರ್ ಶಾಂತಿಗೋಡು, ಸೇಸಪ್ಪ ಕೆ, ದೈವಾರಾಧನಾ ಸಮಿತಿ ಪನೀರ್ ಯಾನೆ ನಲಿಕೆ ಸಮಾಜ ಸೇವಾ ಸಂಘ ಮೂಡಬಿದಿರೆ ಇದರ ಜಿಲ್ಲಾಧ್ಯಕ್ಷ ಜನಾರ್ಧನ ಬುಡೋಳಿ, ಮತ್ತು ಸದಸ್ಯ ದಯಾನಂದ, ರಾಜ್ಯ ಮುಗೇರ ಸಂಘದ ಅಧ್ಯಕ್ಷ ನಂದರಾಜ್ ಸಂಕೇಶ, ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಜಿಲ್ಲಾ ಗೌರವ ಸಲಹೆಗಾರ ರಾಮಣ್ಣ

ನಲಿಕೆಯವರ ಸಂಘ ಬೆಳ್ತಂಗಡಿ ಕಾರ್ಯದರ್ಶಿ ಗಣೇಶ್, ದಲಿತ ಹಕ್ಕುಗಳ ಹೋರಾಟಗಾರರಾದ ಈಶ್ವರಿ ಪದ್ಮುಂಜ ಈ ಸಂದರ್ಭದಲ್ಲಿ ಮಾತನಾಡಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಬೇಡಿಕೆ ಇಟ್ಟರು. ದಲಿತ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷ ಸುಬ್ಬ್ರಾಯ ಕಲ್ಮಂಜ, ದೈವ ನರ್ತಕ ನಾಗೇಶ್ ಬೆಳಾಲ್, ನಲಿಕೆ ಸೇವಾ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಶ್ರೀಧರ್ ಪೆಲಂಪಾಡಿ, ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ಇಲ್ಲಾ ಉಪಾಧ್ಯಕ್ಷ ಲೋಕೇಶ್ ತೆಂಕಿಲ, ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಮಾಜಿ ಸಂಘಟನಾ ಕಾರ್ಯದರ್ಶಿ ಧನಂಜಯ್ ಪುತ್ತೂರು ಸುಳ್ಯ ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್, ವಿಟ್ಲ ದಲಿತ್ ಸೇವಾ ಸಮಿತಿ ಮಾಜಿ ಜಿಲ್ಲಾಧ್ಯಕ್ಷೆ ಯಾಮಿನಿ ಬೆಟ್ಟಂಪಾಡಿ, ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಕಡಬ ಸೇರಿದಂತೆ ನೂರಾರು ದಲಿತ ಸಮುದಾಯದ ನಾಯಕರು, ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕುಶಾಲಾಕ್ಷಿ ಕೆದಿಲ ಸ್ವಾಗತಿಸಿ, ಸೇಸಪ್ಪ ಬೆದ್ರಕಾಡು ವಂದಿಸಿದರು. ಈ ಸಂದರ್ಭದಲ್ಲಿ ಸೇರಿದ ಜನರಿಂದ ರೂ. 14,100/- ಸಂಗ್ರಹಿಸಿ ಎರಡೂ ಮನೆಯವರಿಗೆ ನೀಡಲಾಯಿತು. ಪ್ರತಿಭಟನೆಯ ಬಳಿಕ ಊಟದ ವ್ಯವಸ್ಥೆ ಮಾಡಲಾಯಿತು

Star Of Kudla

Learn More →

Leave a Reply

Your email address will not be published. Required fields are marked *