
ಉಡುಪಿ: ಅಭಿಷೇಕ್ ಆತ್ಮಹತ್ಯೆ ಪ್ರಕರಣ ತನಿಖೆ ಮುಂದುವರಿದಿದ್ದು, ಆರೋಪಿಗಳ ಡಿಜಿಟಲ್ ಸಾಧನಗಳಾದ ಫೋನ್ ಸಂಪರ್ಕ, ಬ್ಯಾಂಕ್ ವಹಿವಾಟುಗಳು, ಫೋನ್ ಮತ್ತು ಚಾಟ್ ದಾಖಲೆಗಳ ಆಧಾರದ ಮೇಲೆ ಆರೋಪಿಗಳನ್ನು ವಿವರವಾಗಿ ವಿಚಾರಣೆ ಮಾಡಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಹನಿ ಟ್ರ್ಯಾಪ್ ಬಗ್ಗೆ ಇಲ್ಲಿಯವರೆಗೆ ಯಾವುದೇ ಪುರಾವೆಗಳಿಲ್ಲ. ಆರೋಪಿ ಹುಡುಗಿಯ ಫೋನ್ನಲ್ಲಿ ಯಾವುದೇ ಅಶ್ಲೀಲ ಫೋಟೋಗಳು ಅಥವಾ ವೀಡಿಯೊಗಳಿಲ್ಲ. ಯಾವುದೇ ವೀಡಿಯೊಗಳನ್ನು ಫಾರ್ವರ್ಡ್ ಮಾಡಿಲ್ಲ. ಅಭಿಷೆೇಕ್ ಹುಡುಗಿಗೆ ವರ್ಗಾಯಿಸಿದ ಎಲ್ಲಾ ಹಣವನ್ನು ಸೆಪ್ಟೆಂಬರ್ನಲ್ಲಿ ಹುಡುಗಿ ಹಿಂತಿರುಗಿಸಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆಗೂ ಮುನ್ನ, ಅಭಿಷೇಕ್ ಲೇಡಿ ಗೋಶೆನ್ ಸಹೋದ್ಯೋಗಿಗಳೊಂದಿಗೆ ವಾಟ್ಸಾಪ್ ಗುಂಪಿನಲ್ಲಿ ಆರೋಪಿ ಹುಡುಗಿಯ ಕೆಲವು ಅಶ್ಲೀಲ ವೀಡಿಯೊಗಳನ್ನು ಹಂಚಿಕೊಂಡಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ, ಆರೋಪಿ ಹುಡುಗಿ ಕರೆ ಮಾಡಿ ಪೊಲೀಸ್ ದೂರು ದಾಖಲಿಸುವುದಾಗಿ ಹೇಳಿದ್ದಳು. ಈಗ ಪ್ರಸಾರವಾಗುತ್ತಿರುವ ವೀಡಿಯೊಗಳನ್ನು ಆರೋಪಿ ಹುಡುಗಿಯ ಸ್ನೇಹಿತ ಆಕೆಗೆ ಕಳುಹಿಸಿದ ಖಾಸಗಿ ವೀಡಿಯೋ. ಇದನ್ನು ಅಭಿಷೇಕ್ ಆಕೆಯ ವಾಟ್ಸಪ್ಗೆ ಲಿಂಕ್ ಪಡೆದು ತೆಗೆದುಕೊಂಡಿದ್ದ ಎಂದು ತಿಳಿಸಿದ್ದರು.
ಅಭಿಷೆೇಕ್ ಫೋನ್ ವಿಶ್ಲೇಷಣೆಗಾಗಿ ಎ್ ಎಸ್ ಎಲ್ಗಾಗಿ ಕಳುಹಿಸಲಾಗಿದೆ. ಆರೋಪಿ ಹುಡುಗಿ ಲೇಡಿ ಗೋಶೆನ್ನಲ್ಲಿ ತನ್ನ ಸ್ನೇಹಿತನ ಒಂದು ವೀಡಿಯೊವನ್ನು (ಉಡುಗೆ ಬದಲಾವಣೆ) ರೆಕಾರ್ಡ್ ಮಾಡಲು ಕಾರಣವನ್ನು ಪರಿಶೀಲಿಸುತ್ತೇವೆ. ವೀಡಿಯೊವನ್ನು ಯಾವುದೇ ಸುಲಿಗೆ ಉದ್ದೇಶಗಳಿಗಾಗಿ ಫಾರ್ವರ್ಡ್ ಮಾಡಲಾಗಿದೆಯೇ ತಿಳಿದುಕೊಳ್ಳಲಾಗುವುದು. ಆತ್ಮಹತ್ಯೆ ಟಿಪ್ಪಣಿಯ ಕೈಬರಹವನ್ನು ಪರಿಶೀಲನೆ ನಡೆಸಲಾಗುವುದು. ತನಿಖೆ ಇನ್ನೂ ಮುಕ್ತಾಯಗೊಂಡಿಲ್ಲ ಎಂದಿದ್ದಾರೆ.


