ಸೆ17: ಉಪ್ಪಿನಂಗಡಿಯಲ್ಲಿ ಮೀಲಾದ್ ಕಾನ್ಫರೆನ್ಸ್

ಪುತ್ತೂರು: ಉಪ್ಪಿನಂಗಡಿ ಸುನ್ನೀ ಕೋ-ಆರ್ಡಿನೇಶನ್ ಸಮಿತಿಯ ವತಿಯಿಂದ ಸೆ. 17ರಂದು ಸಂಜೆ ಉಪ್ಪಿನಂಗಡಿಯ ಎಚ್.ಎಂ ಹಾಲ್ ಮೈದಾನದಲ್ಲಿ ಬೃಹತ್ ಮೀಲಾದ್ ಕಾನ್ಫರೆನ್ಸ್ ಹಾಗೂ ಮೀಲಾದ್ ರ್‍ಯಾಲಿ ನಡೆಯಲಿದೆ ಎಂದು ಸಮಿತಿಯ ಪ್ರದಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ತಿಳಿದಿದ್ದಾರೆ.

ಅವರು ಮಂಗಳವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದಲ್ಲಿ ಕೂಟೇಲ್ ದರ್ಗಾದಿಂದ ಕಾನ್ಫರೆನ್ಸ್ ನಡೆಯುವ ಮೈದಾನದ ತನಕ ರ್‍ಯಾಲಿ ನಡೆಯಲಿದೆ. ಈ ರ್‍ಯಾಲಿಯಲ್ಲಿ ಸಮವಸ್ತ್ರ ಧರಿಸಿದ ಸೇವಾ ತಂಡ ಮತ್ತು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಬಳಿಕ ವೇದಿಕೆಯಲ್ಲಿ ಸಯ್ಯದ್ ಹಂಝ ತಂಙಳ್ ಕರ್ಪಾಡಿ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಯಲಿದೆ. ವಳವೂರು ಮುಹಮ್ಮದ್ ಸಹದಿ ಅಧ್ಯಕ್ಷತೆಯಲ್ಲಿ ನಡೆಯುವ ಮಿಲಾದ್ ಕಾನ್ಫರೆನ್ಸ್ ನ್ನು ಕಾಸಿಂ ಮದನಿ ಕರಾಯ ಉದ್ಘಾಟಿಸಲಿದ್ದಾರೆ.

ಸುಲೈಮಾನ್ ಸಖಾಫಿ ಮಾಲಿಯೇಕಲ್ ಮುಖ್ಯ ಭಾಷಣ ಮಾಡಲಿದ್ದಾರೆ. ಹೈದರ್ ಮದನಿ ಹಿತವಚನ ನೀಡಲಿದ್ದಾರೆ. ಶಹೀರ್ ತಂಙಳ್ ಪೊಸೊಟ್ ನೇತೃತ್ವದಲ್ಲಿ ಸಮಾರೋಪ ಪ್ರಾರ್ಥನೆ ನಡೆಯಲಿದೆ. ಸಮಾರಂಭದಲ್ಲಿ ಧಾರ್ಮಿಕ, ಶೈಕ್ಷಣಿಕ ನಾಯಕರು, ಗಣ್ಯರು ಹಾಗೂ SJU, SJM, SMA, KMJ, SYS, SSF ಮತ್ತು KCF ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಸುಮಾರು ಐದು ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮೀಲಾದ್ ಕಾನ್ಫರೆನ್ಸ್ ಸಮಿತಿ ಅಧ್ಯಕ್ಷ ಅಬ್ದುಲ್ ಶುಕೂರ್ ಮೇದರಬೆಟ್ಟು, ಕನ್ವೀನರ್ ಅಬ್ಬಾಸ್ ಮದನಿ ಬಂಡಾಡಿ, ಉಪಾಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಫೈನಾನ್ಸಿಯಲ್ ಕಾರ್ಯದರ್ಶಿ ಅಶ್ರಫ್ ನೀರಕಟ್ಟೆ ಉಪಸ್ಥಿತರಿದ್ದರು.

Star Of Kudla

Learn More →

Leave a Reply

Your email address will not be published. Required fields are marked *