
ಪುತ್ತೂರು: ಇಂದು ನಿಧನರಾದ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ನಿವಾಸಿ ಕೂಲಿ ಕಾರ್ಮಿಕ ಪೊಡಿಯ ( 65) ರವರ ಅಂತಿಮ ಸಂಸ್ಕಾರಕ್ಕೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸೇವಾ ಸಹಾಯ ಹಸ್ತ ನಿಧಿಯಮೂಲಕ ಆರ್ಥಿಕ ನೆರವು ನೀಡಲಾಯಿತು. ಶಾಸಕ ಅಶೋಕ್ ರೈ ಅವರ ಸೂಚನೆ ಮೇರೆಗೆ ಬ್ಲಾಕ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ ನೆರವು ವಿತರಿಸಿದರು.ಈ ವೇಳೆ ಅವಿನಾಶ್ ರೈ ಕುಡ್ಚಿಲ, ಗ್ಯಾರಂಟಿ ಸದಸ್ಯ ಸಂತೋಷ್ ಭಂಡಾರಿ ಚಿಲ್ಮೆತ್ತಾರು ಉಪಸ್ಥಿತರಿದ್ದರು.


