

ಪುತ್ತೂರು: ಕುಳ ಗ್ರಾಮದ ಕಲ್ಲಂದಡ್ಕದಲ್ಲಿನ ಮುಚ್ಚಿದ ಕೋರೆಯಲ್ಲಿದ್ದ ನೀರಿಗೆ ಬಿದ್ದು ಕಬಕ ನಿವಾಸಿ ವಿದ್ಯಾರ್ಥಿಯೊಬ್ಬರು ಮೃತಪಟ್ಟ ಘಟನೆ ಸೆ.21ರಂದು ಸಂಜೆ ನಡೆದಿದೆ.
ಕಬಕ ನಿವಾಸಿ ಗುಜಿರಿ ವ್ಯಾಪಾರಿ ಹಸೈನ್ ಎಂಬವರ ಪುತ್ರ ಅಜ್ಞಾನ್ (15ವರ್ಷ) ಮೃತಪಟ್ಟ ವಿದ್ಯಾರ್ಥಿ ಎಂದು ಹೇಳಲಾಗಿದೆ. ಸ್ನೇಹಿತರುಗಳು ಕುಳ ಗ್ರಾಮದ ಕಲ್ಲಂದಡ್ಕ ಮುಚ್ಚಿದ ಕೋರೆಯ ಬಳಿ ತೆರಳಿದ್ದರೆನ್ನಲಾಗಿದೆ.
ಅಲ್ಲಿ ಈ ಘಟನೆ ನಡೆದಿದೆ. ಘಟನೆ ಕುರಿತು ವಿಟ್ಲ ಪೊಲೀಸ್ ಠಾಣೆಗೆ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿ ಪುತ್ತೂರು ಸಾಲ್ಮರ ಮೌಂಟನ್ ವ್ಯೂ ಶಾಲೆಯ 10ನೆ ತರಗತಿಯ ವಿದ್ಯಾರ್ಥಿ ಎನ್ನಲಾಗಿದೆ.
ಬಂಟ್ವಾಳ ತಾಲ್ಲೂಕು ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ.


