ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 22 ಮಂದಿಗೆ ವಂಚನೆ ಆರೋಪ: ಪ್ರಕರಣ ದಾಖಲು.

ಕಾಪು, ಸೆ.16: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 22 ಮಂದಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ವಿದೇಶದಲ್ಲಿದ್ದ ಕಾಪುವಿನ ವಸಂತ್ ಡಿ.ಪೂಜಾರಿ ಪರಿಚಯದ ಕೆಲವರಿಗೆ ವಿದೇಶಕ್ಕೆ ತೆರಳಲು ವಿಸಾ ಮಾಡಿಸಿ ಕೊಡಲು ಸುರತ್ಕಲ್ ನಿವಾಸಿ ಜೋಬಿ ಅರಂಗಸ್ಸೆರಿ ದೆವಸ್ಸಿ ಎಂಬವರನ್ನು ಸಂಪರ್ಕಿಸಿದ್ದು, ಅವರು ಚಂಡಿಗಢದಲ್ಲಿರುವ ಕಂಪನಿಯಲ್ಲಿ ವಿದೇಶಕ್ಕೆ ತೆರಳುವ ವ್ಯಕ್ತಿಗಳಿಗೆ ಕೆಲಸದ ವಿಸಾ ಕೊಡಿಸುತ್ತಾರೆ ಎಂಬುದಾಗಿ ತಿಳಿಸಿದ್ದರು.

ವಸಂತ್ 2024ರ ಎ.6ರಂದು ವಿನಾದ ಬಗ್ಗೆ ತಿಳಿದುಕೊಳ್ಳಲು ಚಂಡಿಗಢಗೆ ಹೋಗಿದ್ದು, ಅಲ್ಲಿ ಜೋಬಿ, ವಿಜಯ್ ಸಿಂಗ್, ರಮನ್, ನಿರ್ವೈರ್ ಸಿಂಗ್ ಎಂಬವರನ್ನು ಪರಿಚಯಿಸಿದ್ದರು. ಬಳಿಕ ವಸಂತ್ ಪೂಜಾರಿ ಊರಿಗೆ ಬಂದು ಸೂರಜ್ ಹಾಗೂ ಮನೀಶ್ ಎಂಬವರನ್ನು ಅಜರಬೈಜಾನ್‌ಗೆ ಕಳುಹಿಸಿ ಕೊಡಲು ಕಂಪನಿಗೆ ತಿಳಿಸಿದ್ದು, ಕಂಪೆನಿಯವರು ಒಪ್ಪಿಕೊಂಡ ಮೇರೆಗೆ 2024ರ ಜುಲೈಯಲ್ಲಿ ಒಟ್ಟು 7,00,000ರೂ. ಹಣ ಪಾವತಿಸಿದ್ದರು. ಬಳಿಕ ಕಂಪನಿಯವರು ಸೆ.22ರಂದು ಸೂರಜ್ ಮತ್ತು ಮನಿಶ್‌ಗೆ ಅಜರ ಬೈಜಾನ್‌ಗೆ ಕೆಲಸದ ಆಫರ್ ಮಾಡಿ ವಿಮಾನ ಟಿಕೆಟ್‌ನ್ನು ಮಾಡಿದ್ದು ಸ್ವಲ್ಪ ದಿನದ ಬಳಿಕ ಅದನ್ನು ಈ ಕ್ಯಾನ್ಸಲ್ ಮಾಡಿದ್ದರು. ಈ ಮಧ್ಯೆ 20 ಜನ ಪರಿಚಯದವರಿಗೂ ಕೆಲಸ ಕೊಡಿಸಲು ಒಟ್ಟು 56,91,824ರೂ. ಹಣವನ್ನು ಪಾವತಿಸಿದ್ದರು. 2025ರ ಜನವರಿ ಬಳಿಕ ಇವರೆಲ್ಲ ಹಲವು ಬಾರಿ ಚಂಡಿಗಡಕ್ಕೆ ಹೋಗಿ ಹಣ ವಾಪಾಸ್ಸು ನೀಡುವಂತೆ ಕೇಳಿದ್ದು, ಅದಕ್ಕೆ ಆರೋಪಿಗಳು 2025ರ ಜು.10 ಹಾಗೂ ಜು.30ಕ್ಕೆ ತಲಾ 6,00,000ರೂ. ಗಳ ಚೆಕ್‌ಗಳನ್ನು ನೀಡಿದ್ದು ಅವುಗಳನ್ನು ಬ್ಯಾಂಕಿನಲ್ಲಿ ಪರಿಶೀಲಿಸಿದಾಗ ಅವು ಕ್ಲೋಸ್ ಅಕೌಂಟ್‌ನ ಚೆಕ್‌ಗಳು ಎಂಬುದು ತಿಳಿದುಬಂತು.
ಹೀಗೆ ಆರೋಪಿಗಳು 22 ಮಂದಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ
ಒಟ್ಟು 63,91,824ರೂ. ಹಣವನ್ನು ಪಡೆದು ಕೊಂಡು ಕೆಲಸವನ್ನು ಜೋಡಿಸದ ಹಣವನ್ನು ವಾಪಾಸ್ಸು ನೀಡದೇ ಮೋಸ ಹಾಗೂ ವಂಚನೆ ಮಾಡಿರುವುದಾಗಿ ದೂರಲಾಗಿದೆ.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಶಿರೂರು ಶಾಲೆಯಲ್ಲಿ SSLC ರಿಸಲ್ಟ್ ಚಮತ್ಕಾರ ಗುರುಚರಣಕ್ಕೆ ಶಿರಬಾಗಿದ ಶಾಸಕ ಗುರುರಾಜ್ ಗಂಟಿಹೊಳೆ ; ಕಠಿಣ ಶ್ರಮಕ್ಕೆ ಒಲಿದ ‘ಫಲಿತಾಂಶ’ದ ಭಾಗ್ಯ!
1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.