ಸಹೋದ್ಯೋಗಿಯಿಂದ ಕೇರಳದ ರಬ್ಬರ್ ಟ್ಯಾಪಿಂಗ್ ಕಾರ್ಮಿಕನ ಕೊಲೆ..ಬೈಂದೂರು: ತಾಲೂಕಿನ ದೇವರಗದ್ದೆಯಲ್ಲಿ ಇಬ್ಬರು ರಬ್ಬರ್ ಟ್ಯಾಪಿಂಗ್ ಕೆಲಸಗಾರರ ನಡುವಿನ ಹಳೆಯ ವೇತನ ವಿವಾದವು ಕೊಲೆಯಲ್ಲಿ ಅಂತ್ಯವಾದ ಘಟನೆ ಸೆ.14 ರಂದು ನಡೆದಿದೆ.

ಸಹೋದ್ಯೋಗಿಯಿಂದ ಕೇರಳದ ರಬ್ಬರ್ ಟ್ಯಾಪಿಂಗ್ ಕಾರ್ಮಿಕನ ಕೊಲೆ..ಬೈಂದೂರು: ತಾಲೂಕಿನ ದೇವರಗದ್ದೆಯಲ್ಲಿ ಇಬ್ಬರು ರಬ್ಬರ್ ಟ್ಯಾಪಿಂಗ್ ಕೆಲಸಗಾರರ ನಡುವಿನ ಹಳೆಯ ವೇತನ ವಿವಾದವು ಕೊಲೆಯಲ್ಲಿ ಅಂತ್ಯವಾದ ಘಟನೆ ಸೆ.14 ರಂದು ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಕೊಟ್ಟಾಯಂ ಜಿಲ್ಲೆಯ ಬಿನ್ನು ಫಿಲಿಪ್ (45) ಎಂದು ಗುರುತಿಸಲಾಗಿದೆ.ಕೇರಳದ ಕೊಲ್ಲಂ ಜಿಲ್ಲೆಯ ಉದಯ್ ಕುಮಾರ್ (42) ತಮ್ಮ ಸಹೋದ್ಯೋಗಿ ಬಿನ್ನು ಫಿಲಿಪ್ (45) ಅವರ ಹೊಟ್ಟೆಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ರಬ್ಬರ್ ಟ್ಯಾಪಿಂಗ್ ಚಾಕುವಿನಿಂದ ಇರಿದಿದ್ದಾರೆ . ಚಾಕುವಿನಿಂದ ಇರಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಬಿನ್ನು ಫಿಲಿಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲ್ಲೆ ನಡೆಸಿದ ಕೂಡಲೇ ಉದಯ್ ಕುಮಾರ್ ಪರಾರಿಯಾಗಿದ್ದು, ನಂತರ ಬೈಂದೂರು ಪೊಲೀಸರು ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.ಇಬ್ಬರೂ ಕಾರ್ಮಿಕರು ಸ್ಥಳೀಯ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಎರಡು ವರ್ಷಗಳಿಂದ ಅಲ್ಲೇ ಒಂದು ಶೆಡ್‌ನಲ್ಲಿ ಜೊತೆಯಾಗಿ ವಾಸಿಸುತ್ತಿದ್ದರು ಇಬ್ಬರೂ ಕೇರಳಕ್ಕೆ ಸೇರಿದವರಾಗಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ

News Editor

Learn More →

Leave a Reply

Your email address will not be published. Required fields are marked *