ಹರೀಶ್ ಪೂಂಜರಿಂದ ಅಶೋಕ್ ರೈ ವ್ಯಕ್ತಿತ್ವ ಕುಂದಿಸುವ ಪ್ರಯತ್ನ: ಜಿಲ್ಲಾ ಕಾಂಗ್ರೆಸ್ ವಕ್ತಾರರ ಆರೋಪ!!

ಪುತ್ತೂರು: ಬೆಳ್ತಂಗಡಿ ಶಾಸಕರು ಹಲವು ರೀತಿಯಲ್ಲಿ ಪುತ್ತೂರು ಶಾಸಕರ ವ್ಯಕ್ತಿತ್ವ ಕುಂದಿಸುವ ಪ್ರಯತ್ನ ಮಾಡುತ್ತಿದ್ದು, ಸಣ್ಣ ಅನುಭವದಿಂದಲೂ ಯಾವುದೇ ರೀತಿಯ ಅಭಿವೃದ್ಧಿಯನ್ನು ಮಾಡಬಹುದು ಎಂಬುದನ್ನು ಪುತ್ತೂರು ಶಾಸಕರು ತೋರಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಹೇಳಿದರು.

ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪ್ರತಿ ಹೇಳಿಕೆಯ ಸಂದರ್ಭದಲ್ಲೂ ಶಾಸಕ ಹರೀಶ್ ಪೂಂಜ ಅವರು ವಿನಾ ಕಾರಣ ಶಾಸಕ ಅಶೋಕ್ ರೈಗಳನ್ನು ಎಳೆದು ತಂದು ಏನೇನೋ ಮಾತನಾಡುತ್ತಿದ್ದಾರೆ. ಬೆಳ್ತಂಗಡಿಯ ನೆರಿಯದಂತಹ ಪ್ರದೇಶದಲ್ಲಿ ಆದಿವಾಸಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಮೊದಲು ಅವರಿಗೆ ನ್ಯಾಯ ಕೊಡುವ ಕಾರ್ಯ ಮಾಡಲಿ.
ಉಪ್ಪಿನಂಗಡಿ- ಕುಪ್ಪೆಟ್ಟಿ ರಸ್ತೆಯನ್ನು ದುರಸ್ತಿ ಮಾಡಿಸಲು ನಿಮ್ಮಿಂದ ಸಾಧ್ಯವಾಗದೇ ಇದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರಿಗೆ ಮನವಿ ನೀಡಲಿ, ಅವರು ಅನುದಾನ ಕೊಡಿಸುವ ಪ್ರಯತ್ನ ಮಾಡಬಹುದು. ಹಿಂದಿನ ಸರಕಾರದ ಅವಧಿಯಲ್ಲಿ 40 ಶೇ. ಕಮಿಷನ್ ದಂಧೆ ಎಂಬುದು ಬೆಳ್ತಂಗಡಿಯಿಂದಲೇ ಆರಂಭಗೊಂಡಿದ್ದು, ಈಗ ಕಮಿಷನ್ ಸಿಗುವುದಿಲ್ಲ ಎಂಬ ಕಾರಣದಿಂದ ಈ ರಸ್ತೆಯನ್ನು ಅಭಿವೃದ್ಧಿ ಮಾಡಿಸದೇ ಇರುವ ಸಾಧ್ಯತೆಯೂ ಇರಬಹುದು ಎಂಬುದು ನಮ್ಮ ಅನುಮಾನವಾಗಿದೆ ಎಂದರು.


ರಾಜ್ಯ ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಮಾತನಾಡಿ, ಹರೀಶ್ ಪೂಂಜ ಅವರು ಜವಾಬ್ದಾರಿಯುತ ಶಾಸಕ, ನಾಯಕರೇ ಅಲ್ಲವಾಗಿದ್ದು, ಬಿಜೆಪಿ ಅವಧಿಯಲ್ಲೇ ನಡೆದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುವ ಮೊದಲೇ ನಡೆದ ಬೆಳೆ ವಿಮೆ ಟರ್ಮ್ ಶೀಟ್ ಬದಲಾವಣೆಯ ಆರೋಪವನ್ನು ಈಗ ಕಾಂಗ್ರೆಸ್ ಮೇಲೆ ಹೊರಿಸುತ್ತಿದ್ದಾರೆ. ಅದರ ಕುರಿತು ನಾವು ದಾಖಲೆ ಸಹಿತ ಜನರ ಮುಂದಿಟ್ಟಿದ್ದು, ಯಾವ ಬಿಜೆಪಿ ನಾಯಕರು ಕೂಡ ಅದಕ್ಕೆ ಉತ್ತರ ಕೊಡುವ ಕಾರ್ಯ ಮಾಡಿಲ್ಲ ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ರಾಮ ಮೇನಾಲ, ಸಿರಿಲ್ ರಾಡ್ರಿಗಸ್, ಮಹಾಲಿಂಗ ನಾಯ್ಕ್ ಉಪಸ್ಥಿತರಿದ್ದರು.

Star Of Kudla

Learn More →

Leave a Reply

Your email address will not be published. Required fields are marked *