ಒಂದೇ ಕುಟುಂಬದ ನಾಲ್ವರ ದುರಂತ ಸಾವು!! ತಾಯಿ, ಮಕ್ಕಳು ವಿಷ ಸೇವಿಸಿ ಸಾವನ್ನಪ್ಪಿದರೇ, ಗಂಡ ರೈಲಿಗೆ ತಲೆಕೊಟ್ಟು ದುರಂತ ಅಂತ್ಯ

ರಾಯಚೂರು: ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ರಾಯಚೂರಿನ ಜಲಾಲನಗರದಲ್ಲಿ ನಡೆದಿದೆ. ಜಲಾಲನಗರ ನಿವಾಸಿ ವಿಷ್ಣು, ಪತ್ನಿ ಅರುಣಾ (40), ಮಕ್ಕಳಾದ ಶ್ಲೋಕ (10) ಮತ್ತು ಖುಷಿ (4) ಮೃತಪಟ್ಟವರು.

ಪತಿ, ಪತ್ನಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಪತ್ನಿ ಮತ್ತು ಮಕ್ಕಳು ಮನೆಯಲ್ಲಿ ಶವವಾಗಿ ಪತ್ತೆಯಾದರೆ, ಪತಿ ವಿಷ್ಣು ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಯಿ ಹಾಗೂ ಇಬ್ಬರು ಮಕ್ಕಳ ಸಾವಿನ ಬಳಿಕ ಪತಿ ರೈಲ್ವೆ ಹಳಿಗೆ ಬಿದ್ದು ಸಾವು ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಘಟಗೆ ಕಾರಣ ಎನ್ನಲಾಗುತ್ತಿದೆ. ಅನೇಕ ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿದ್ದು, ರವಿವಾರ ಗಂಡ ಹೆಂಡತಿಯ ನಡುವೆ ಜಗಳ ನಡೆದಿದೆ.

ಈ ವೇಳೆ ಬಳಿಕ ಗಂಡ‌ ವಿಷ್ಣುರೆಡ್ಡಿ ಮನೆ ಬಿಟ್ಟು ಸಾಯುತ್ತೇನೆ ಎಂದು ಹೋಗಿದ್ದಾರೆ. ಸ್ವಲ್ಪ ಹೊತ್ತಲ್ಲೇ ಪತ್ನಿ ಅರುಣಾ‌, ಮಕ್ಕಳಾದ ಶ್ಲೋಕ ಹಾಗೂ ಖುಷಿಗೆ ವಿಷ ನೀಡಿ‌ ತಾನೂ ಸೇವನೆ ಮಾಡಿದ್ದಾರೆ ಎನ್ನಲಾಗಿದೆ

ಘಟನೆಯ ಸ್ವಲ್ಪ ಹೊತ್ತಿನ ಬಳಿಕ ಗಂಡ ವಿಷ್ಣುರೆಡ್ಡಿಗೆ ಮೊಬೈಲ್ ಕರೆ ಮಾಡಿ ಸಂಬಂಧಿಕರೊಬ್ಬರು ವಿಷಯ ತಿಳಿಸಿದ್ದಾರೆ. ಹೆಂಡತಿ ಮಕ್ಕಳು‌ ಸಾವಿನ ಅಘಾತದಿಂದ ರಾಯಚೂರು ತಾಲೂಕಿನ‌ ಚಿಕ್ಕಸುಗೂರು ಬಳಿಯ ರೈಲ್ವೆ ಹಳಿಗೆ ಬಿದ್ದು ವಿಷ್ಣು ರೆಡ್ಡಿ ಸಾವನ್ನೂಪ್ಪಿದ್ದಾನೆ

ಮಾಹಿತಿ ತಿಳಿದು‌ ರೈಲ್ವೆ ಪೊಲೀಸರು ವಿಷ್ಣುರೆಡ್ಡಿಯ ಮೃತದೇಹ ರಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *