ಲೋಕಾಯುಕ್ತ ಬಲೆಗೆ ಬಿದ್ದ ಹೆಡ್‌ ಕಾನ್‌ಸ್ಟೆಬಲ್‌ ಫಿರೋಜ್‌ ಖಾನ್‌ ಬಳಿ ₹64 ಕೋಟಿ ಮೌಲ್ಯದ 46 ಸ್ಥಿರಾಸ್ತಿ ಪತ್ತೆ !!

ಇಂದೋರ್‌ (ಪಿಟಿಐ): ಇವರು ಹೆಡ್‌ ಕಾನ್‌ಸ್ಟೆಬಲ್‌ ಫಿರೋಜ್‌ ಖಾನ್‌. ಇಂದೋರ್‌ನಲ್ಲಿ ಇರುವ ಪೋಲಿಸ್‌ ತರಬೇತಿ ಕಾಲೇಜಿನಲ್ಲಿ(ಪಿಟಿಸಿ) ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಇವರ ಬಳಿ ಸಿಕ್ಕಿದ್ದು ₹64 ಕೋಟಿ ಮೌಲ್ಯದ 46 ಸ್ಥಿರಾಸ್ತಿ.
ಫಿರೋಜ್‌ ಖಾನ್‌, ಇವರ ಕುಟುಂಬ ಸದಸ್ಯರು, ಸಹಚರರು ಮತ್ತು ಖಾಸಗಿ ಕಂಪನಿಯೊಂದರ ಹೆಸರಿನಲ್ಲಿ ಈ ಆಸ್ತಿಗಳಿವೆ. ‘ಬಹಳ ದಿನಗಳಿಂದ ಕರ್ತವ್ಯಕ್ಕೆ ಖಾನ್‌ ಅವರು ಹಾಜರಾಗಿಲ್ಲ. ಪೊಲೀಸ್‌ ಇಲಾಖೆಯಲ್ಲಿದ್ದುಕೊಂಡು ವಿವಾದದಲ್ಲಿರುವ ಆಸ್ತಿಗಳ ಸಂಬಂಧ ‘ಡೀಲ್‌’ ಮಾಡಿಸಿಕೊಡುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರು ನೀಡಲಾಗಿತ್ತು. ಪ್ರಕರಣದ ಕುರಿತು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದರು.

ವಿವಿಧ ಊರುಗಳಲ್ಲಿ ಮನೆ, ಕೃಷಿ ಜಮೀನು, ವಸತಿ ಮತ್ತು ವಾಣಿಜ್ಯ ನಿವೇಶನಗಳ ಖರೀದಿ. ಈ ಆಸ್ತಿಗಳ ಮಾರ್ಗಸೂಚಿ ದರ ₹17.19 ಕೋಟಿ. ಆದರೆ, ಮಾರುಕಟ್ಟೆ ಮೌಲ್ಯ ₹64.01 ಕೋಟಿಗೂ ಅಧಿಕ ಖಾಸಗಿ ಕಂಪನಿಯು ಖಾನ್‌ ಅವರ ಪತ್ನಿ ಹೀನಾ ಮತ್ತು ಯುವರಾಜ್‌ ಪನ್ವಾರ್‌ ಎಂಬುವರು ಜಂಟಿಯಾಗಿ ನಡೆಸುತ್ತಿದ್ದಾರೆ

ಪೊಲೀಸ್‌ ಇಲಾಖೆಯಲ್ಲಿ ಖಾನ್‌ ಅವರು 24 ವರ್ಷ ಕೆಲಸ ಮಾಡಿದ್ದಾರೆ. ಇವರಿಗೆ ನೀಡಲಾಗುವ ಸಂಬಳವನ್ನು ಲೆಕ್ಕಹಾಕಿದರೆ, 24 ವರ್ಷಗಳಲ್ಲಿ ₹75 ಲಕ್ಷ ಸಂಬಳ ಪಡೆದುಕೊಂಡಿದ್ದಾರೆ. ಸಂಬಳವನ್ನೂ ಸೇರಿ ಇತರೆ ಮೂಲಗಳಿಂದ ಗಳಿಸಿದ್ದು, ಸುಮಾರು ₹1.94 ಕೋಟಿ

Star Of Kudla

Learn More →

Leave a Reply

Your email address will not be published. Required fields are marked *