ನೂಡಲ್ಸ್ ತಿಂದು ಮಲಗಿದ್ದ ಒಂದೇ ಕುಟುಂಬದ ಐವರ ನಿಗೂಢ ಸಾವಿಗೆ ಬಿಗ್ ಟ್ವಿಸ್ಟ್!!

ಉತ್ತರ ಪ್ರದೇಶ: ಗ್ರೇಟರ್ ನೋಯ್ಡಾದ ರಬುಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗ್ಲಾ ಶ್ರೀ ಪದಮ್ ಗ್ರಾಮದಲ್ಲಿ ಒಂದೇ ಕುಟುಂಬದ ಐವರು ನಿಗೂಢವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಅದರಂತೆ, ಪ್ರಾಥಮಿಕ ತನಿಖೆಯಲ್ಲಿ ಆಹಾರ ವಿಷಪ್ರಾಶನದಿಂದ (ನೂಡಲ್ಸ್ ಸೇವನೆಯಿಂದ) ಸಾವು ಸಂಭವಿಸಿದೆ ಎಂದು ಶಂಕಿಸಲಾಗಿತ್ತಾದರೂ, ಪ್ರಸ್ತುತ ಇದು ನೂಡಲ್ಸ್ ಕಾರಣದಿಂದ ಆದ ಸಾವಲ್ಲ, ಬದಲಿಗೆ ಆಸ್ತಿ ಕಲಹದ ಹಿನ್ನೆಲೆಯಲ್ಲಿ ನಡೆದ ಸಾಮೂಹಿಕ ಸಾವು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಏನಿದು ಘಟನೆ?

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ರಬುಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಂಗ್ಲಾ ಶ್ರೀಪಾದಂ ಗ್ರಾಮದಲ್ಲಿ ಮಹೇಶ್ (37), ಅವರ ಪತ್ನಿ ಲಲಿತಾ (35), ಮತ್ತು ಅವರ ಮೂವರು ಮಕ್ಕಳಾದ ಲಡ್ಡು (11), ಮಿಷ್ಟಿ (7) ಹಾಗೂ ಸಾಕ್ಷತ್ (3) ಶನಿವಾರ ಬೆಳಿಗ್ಗೆ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದಕ್ಕೂ ಮುನ್ನ ಶುಕ್ರವಾರ ರಾತ್ರಿ ಈ ಕುಟುಂಬವು ಮಲಗುವ ಮುನ್ನ ಮ್ಯಾಗಿ ನೂಡಲ್ಸ್ ಹಾಗೂ ಚಹಾ ಸೇವಿಸಿತ್ತು. ಮರುದಿನ ಬೆಳಿಗ್ಗೆ ಎಲ್ಲರ ಬಾಯಲ್ಲಿ ನೊರೆ ಬಂದು ಮೃತಪಟ್ಟಿರುವುದು ಕಂಡುಬಂದಿದ್ದರಿಂದ, ಇದು ನೂಡಲ್ಸ್‌ನಿಂದ ಉಂಟಾದ ಆಹಾರ ವಿಷಪ್ರಾಶನ ಇರಬಹುದು ಎಂದು ಮೊದಲು ಶಂಕಿಸಲಾಗಿತ್ತು.

ತಿರುವು ನೀಡಿದ ವಾಯ್ಸ್ ನೋಟ್

ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರಿಗೆ ಮೃತ ಮಹೇಶ್ ಅವರ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದ್ದ ಒಂದು ಮಹತ್ವದ ವಾಯ್ಸ್ ನೋಟ್ ಲಭ್ಯವಾಗಿದೆ. ಅದರಲ್ಲಿ ಮಹೇಶ್ ಅವರು ತಮ್ಮ ಈ ದುಸ್ಥಿತಿಗೆ ಮತ್ತು ಈ ಸಾವಿನ ನಿರ್ಧಾರಕ್ಕೆ ತಮ್ಮ ಇಬ್ಬರು ಸಹೋದರಿಯರು ಹಾಗೂ ಭಾವನೇ ನೇರ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *