ಪುತ್ತೂರು:ಪುತ್ತೂರಿನ ಬಹುಕಾಲದ ಬೇಡಿಕೆಯಾಗಿರುವ ಸರಕಾರಿ ಮೆಡಿಕಲ್ ಕಾಲೇಜಿನ ಆರಂಭಿಕ ಹಂತದಲ್ಲಿ 300 ಹಾಸಿಗೆಗಳ ಮೆಡಿಕಲ್ ಕಾಲೇಜು ಆಸ್ಪತ್ರೆ ನಿರ್ಮಾಣಕ್ಕೆ ಬನ್ನೂರು ಗ್ರಾ.ಪಂ ವ್ಯಾಪ್ತಿಯ ಸೇಡಿಯಾಪಿನಲ್ಲಿ ಭೂಮಿ ಪೂಜೆ ನೆರವೇರಿತು. ಶಾಸಕ ಅಶೋಕ್ ಕುಮಾರ್ ರೈ ಅವರು ಭೂಮಿ ಪೂಜೆ ನೆರವೇರಿಸಿ ಕೆಸರುಕಲ್ಲು ಹಾಕಿ,ಹಾಲು,ಜೇನು,ತುಪ್ಪ ಹಾಗೂ ಸೀಯಾಳ ಅರ್ಪಿಸಿದರು. ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಸದಸ್ಯರನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಶಾಲು ಹೊದೆಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಹೋರಾಟ ಸಮಿತಿಯ ಸದಸ್ಯರು ಶಾಸಕರನ್ನು ಸನ್ಮಾನಿಸಿದರು. ಭೂಮಿ ಪೂಜೆಯ ಬಳಿಕ ನಡೆದ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಸೇಡಿಯಾಪಿನ ಮಣ್ಣಿನಲ್ಲಿ 300 ಹಾಸಿಗೆಗಳ ಮೆಡಿಕಲ್ ಆಸ್ಪತ್ರೆಯ ಶಿಲಾನ್ಯಾಸ ನಡೆದಿರುವುದು ಪುತ್ತೂರಿನ ಇತಿಹಾಸದಲ್ಲಿ ದಾಖಲಿಸುವ ದಿನವಾಗಿದೆ.ಯಾಕೆಂದರೆ ಹಿಂದೆ ಶಕುಂತಳಾ ಶೆಟ್ಟಿಯವರು ಶಾಸಕರಾಗಿದ್ದ ಸಂದರ್ಭ ಹೋರಾಟ ಸಮಿತಿ ಅಲ್ಲಲ್ಲಿ ಮೀಟಿಂಗ್ ಮಾಡುವುದನ್ನು ಮಾಧ್ಯಮದ ಮೂಲಕ ನೋಡಿದ್ದೆ.ಮೆಡಿಕಲ್ ಕಾಲೇಜು ಹೋರಾಟ ಮಾತ್ರ,ಮಾಧ್ಯಮಕ್ಕೆ ಸೀಮಿತ.ಕಾಲೇಜು ಆಗ್ಲಿಕ್ಕಿಲ್ಲ ಎಂದು ಆಗ ನನ್ನ ಮನಸ್ಸಿನ ಭಾವನೆಯಲ್ಲೂ ಇತ್ತು.ಋಣಾನು ಬಂಧ ಹೇಗೆಂದು ಗೊತ್ತಿಲ್ಲ.ನನಗೆ ಶಾಸಕನಾಗುವ ಯೋಗ ಭಾಗ್ಯ ಬಂತು.ಹೋರಾಟ ಸಮಿತಿಯ ಮನವಿಗೆ ಪೂರಕವಾಗಿ ನನಗೂ ಮೆಡಿಕಲ್ ಕಾಲೇಜು ಮಾಡುವ ಆಸೆ ಇತ್ತು. ಆದರೆ ಇನ್ನೊಂದು ಕಡೆಯಿಂದ ಬಡ ಬಡ ಬಡ ಎಂದು ಒಡೆಯುತ್ತಿತ್ತು.ಯಾಕೆಂದರೆ ಬಾಯಲ್ಲಿ ಹೇಳಿದ ಮಾತನ್ನು ಮಾಡಿ ತೋರಿಸಬೇಕಲ್ಲ ಎಂಬ ಚಿಂತನೆ.ಆಲೋಚನೆ ಮಾಡುತ್ತಾ ಇದ್ದೆ ಒಂದಲ್ಲ ಒಂದು ದಿನ ಖಂಡಿತಾ ಸಾಧನೆ ಮಾಡುತ್ತೇನೆ ಎಂಬ ನಂಬಿಕೆ ಇತ್ತು. ಇವತ್ತು ಅದು ಸಾಕಾರಗೊಂಡಿದೆ.ಮೆಡಿಕಲ್ ಕಾಲೇಜಿಗೆ ಈಗಾಗಲೇ 550 ಕೋಟಿ ರೂ.ಮಂಜೂರಾಗಿದ್ದು,ಮೊದಲ ಹಂತದಲ್ಲಿ 182 ಕೋಟಿ ರೂ.ವೆಚ್ಚದಲ್ಲಿ 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗಲಿದೆ. ಮುಂದಿನ ಒಂದು ತಿಂಗಳೊಳಗೆ ಮೆಡಿಕಲ್ ಕಾಲೇಜಿಗೆ ಮುಖ್ಯಮಂತ್ರಿಗಳ ಮೂಲಕ ಶಿಲಾನ್ಯಾಸದ ಬೃಹತ್ ಕಾರ್ಯಕ್ರಮ ನಡೆಸುವ ಉದ್ದೇಶವಿದೆ ಎಂದು ಹೇಳಿದರು.ಚುನಾವಣಾ ಸಂದರ್ಭದಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ತರುವ ಭರವಸೆ ನೀಡಿದಾಗ ಅನೇಕರು ಅದನ್ನು ನಂಬಿರಲಿಲ್ಲ.ಹಿಂದಿನ ಶಾಸಕಿ ಶಕುಂತಳಾ ಶೆಟ್ಟಿ ಅವರ ಅವಧಿಯಲ್ಲಿ ಆರಂಭವಾಗಿದ್ದ ಮೆಡಿಕಲ್ ಕಾಲೇಜು ಹೋರಾಟವನ್ನು ಮುಂದುವರಿಸಿಕೊಂಡು ಬಂದು ಇದೀಗ ಈ ಹಂತಕ್ಕೆ ತಲುಪಿದ್ದೇವೆ ಎಂದು ಅವರು ಹೇಳಿದರು. :
ಶಿಲಾನ್ಯಾಸಗೊಂಡಿರುವ ಆಸ್ಪತ್ರೆಯ ಕಾಮಗಾರಿಯನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಿ ಜನರಿಗೆ ಸೇವೆ ಒದಗಿಸುವ ಗುರಿಯಿದೆ. ಮೆಡಿಕಲ್ ಕಾಲೇಜು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಮಾದರಿಯಾಗಬೇಕು ಎಂಬ ಆಶಯವಿದೆ ಎಂದು ಹೇಳಿದ ಅಶೋಕ್ ಕುಮಾರ್ ರೈ ಅವರು, ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಫಿಸಿಯೋಥೆರಪಿ, ನರ್ಸಿಂಗ್, ಡೆಂಟಲ್ ಹಾಗೂ ಆಯುರ್ವೇದ ಸೇರಿದಂತೆ ವಿವಿಧ ಕೋರ್ಸ್ಗಳು ಆರಂಭವಾಗಲಿವೆ.ಸುಮಾರು 25 ಸಾವಿರ ಮಂದಿ ಹೊರಗಿನಿಂದ ಬರುವ ನಿರೀಕ್ಷೆಯಿದ್ದು,10ರಿಂದ 12 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದು. ಇದರಿಂದ ಪುತ್ತೂರಿನ ಆರ್ಥಿಕ ಹಾಗೂ ನಗರಾಭಿವೃದ್ಧಿಗೂ ವೇಗ ದೊರೆಯಲಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ದೊರೆಯಬೇಕು ಹಾಗೂ ಮೆಡಿಕಲ್ ಕಾಲೇಜಿನಲಿ ತುಳು ಭಾಷೆಗೂ ಆದ್ಯತೆ ನೀಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದವರು ತಿಳಿಸಿದರು. ಮೆಡಿಕಲ್ ಕಾಲೇಜು ಹೋರಾಟ ಸಮಿತಿ ತನ್ನ ಪ್ರಯತ್ನಕ್ಕೆ ಪೂರಕವಾಗಿ ಕೆಲಸ ಮಾಡಿರುವುದನ್ನು ಗುರುತಿಸಿ ಶಾಸಕ ಅಶೋಕ್ ಕುಮಾರ್ ರೈಯವರು, ಹೋರಾಟ ಸಮಿತಿಯ ಸದಸ್ಯರಾದ ದಿನೇಶ್ ಭಟ್, ರಾಜೇಶ್ಕೃಷ್ಣ ಶರ್ಮ, ವೆಂಕಟ್ರಮಣ ಪುಣಚ, ಸಂಜೀವ ಕಬಕ, ಸಂದೀಪ್ ಲೋಬೋ, ದಿನೇಶ್ ಹೆಗ್ಡೆ, ಅಶೋಕ್ ಅಡ್ಯಂತಾಯ, ಡಾ.ಸಂದೀಪ್ ನಾಯ್ಕ, ಝೇವಿಯರ್ ಡಿ’ಸೋಜ,ವಿಶ್ವಪ್ರಸಾದ್ ಸೇಡಿಯಾಪು,ರೂಪೇಶ್ ರೈ ಅಲಿಮಾರು,ಎಂ.ಬಿ.ವಿಶ್ವನಾಥ ರೈ, ಅಮಳ ರಾಮಚಂದ್ರ ಭಟ್, ಸೇಡಿಯಾಪು ಜನಾರ್ದನ ಭಟ್, ರಾಜೇಶ್ ಪ್ರೆಸ್ನ ಎಂ.ಎಸ್.ರಘುನಾಥ ರಾವ್, ಉಲ್ಲಾಸ್ ಕೋಟ್ಯಾನ್ ಅವರಿಗೆ ಶಾಲು ಹೊದೆಸಿ ಗೌರವಿಸಿದರು.
ಇದೇ ಸಂದರ್ಭ ಶಾಸಕರನ್ನು ಮೆಡಿಕಲ್ ಕಾಲೇಜು ಹೊರಾಟ ಸಮಿತಿ ಸದಸ್ಯರು ಸನ್ಮಾನಿಸಿದರು.ಗುತ್ತಿಗೆದಾರ ಬಾಬು ರಾಯ ಅವರು ಶಾಸಕರನ್ನು ಸನ್ಮಾನಿಸಿದರು. ಸೇಡಿಯಾಪು ಜಾಗದಲ್ಲಿ ಮೆಡಿಕಲ್ ಕಾಲೇಜಿನ ಭೂಮಿ ಪೂಜೆಯಲ್ಲ ಸಹಕರಿಸಿದ ಡೆನ್ನಿಸ್ ಮಸ್ಕರೇನಸ್, ಮೆಲ್ವಿನ್ ಅವರನ್ನು ಗುರುತಿಸಲಾಯಿತು. ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಪ್ರಮುಖರಾದ ಸೇಡಿಯಾಪು ವಿಶ್ವಪ್ರಸಾದ್ ಭಟ್,ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷರೂ ಆಗಿದ್ದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ,ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು,ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ,ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್.ಮೊಹಮ್ಮದ್,ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸೀಫ್, ರೈತ ಸಂಘದ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ರಘು ಬೆಳ್ಳಿಪ್ಪಾಡಿ,ಪುಡಾ ಮಾಜಿ ಅಧ್ಯಕ್ಷ ಪ್ರಸಾದ್ಕೌಶಲ್ ಶೆಟ್ಟಿ,ತಾಲೂಕು ಪಂಚ ಗ್ಯಾರೆಂಟಿ ಯೋಜನಾ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ನಗರ ಯೋಜನಾ ಪ್ರಾಕಾರದ ಅಧ್ಯಕ್ಷ ಅಮಲ ರಾಮಚಂದ್ರ ಭಟ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮುರಳಿಧರ ರೈ ಮಠಂತಬೆಟ್ಟು ಸ್ವಾಗತಿಸಿದರು.ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.ಕಾಂಗ್ರೆಸ್ ಪ್ರಚಾರ ಸಮಿತಿ ಪುತ್ತೂರು ನಗರ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, -ರೂಕ್ ಬಾಯಬೆ, ನಝೀರ್ ಮಠ, ಪದ್ಮನಾಭ ಶೆಟ್ಟಿ, ನಡುಬೈಲುಗುತ್ತು ಗೋಪಾಲಕೃಷ್ಣ ಪೂಜಾರಿ, ಪ್ರಕಾಶ್ ಗೌಡ, ನವೀನ್ ರೈ, ಜಯಪ್ರಕಾಶ್ ಬದಿನಾರು, ವಿಕ್ರಂ ಶೆಟ್ಟಿ ಅಂತರ, ಸುಪ್ರೀತ್ ಕಣ್ಣರಾಯ, ಸುದರ್ಶನ್, ಮಹಾಬಲ ಪೂಜಾರಿ, ಡೆನ್ನಿಸ್ ಮಸ್ಕರೇನಸ್, ಸುಧಾಕರ್ ಕೆಮ್ಮಾಯಿ, ಚಿದಾನಂದ ರೈ, ಸಾಯಿರ ಬಾನು ಸಹಿತ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


