ಪುತ್ತೂರು: ಕಿಲ್ಲೆ ಮೈದಾನದ ಗಣೇಶನ ವಿಗ್ರಹ ಪ್ರತಿಷ್ಠಾಪನೆ

ಪುತ್ತೂರು: ಪುತ್ತೂರಿನ ಇತಿಹಾಸ ಪ್ರಸಿದ್ಧ ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿ ವತಿಯಿಂದ ನಡೆಯುತ್ತಿರುವ 69ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವದ ಸಭಾ ಕಾರ್ಯಕ್ರಮವನ್ನು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಉದ್ಘಾಟಿಸಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಅಶೋಕ್ ರೈ ಮಾತನಾಡಿ, ಧರ್ಮದ ಬಗ್ಗೆ ಆಸಕ್ತಿ ಸಮಾಜದಲ್ಲಿ ಹೆಚ್ಚಾಗುತ್ತಿದೆ. ಶ್ರದ್ಧಾ ಕೇಂದ್ರಗಳು ಇದಕ್ಕೆ ಕಾರಣವಾಗುತ್ತಿದೆ. ಮಕ್ಕಳಿಗೆ ದಾರ್ಮಿಕ ಚಿಂತನೆ, ಆಚಾರ-ವಿಚಾರದ ಅರಿವು ಕೊಡದಿದ್ದರೆ ನಮ್ಮ ಸಂಸ್ಕøತಿ ನಾಶವಾಗುತ್ತದೆ. ಗಣಪತಿ ಅನುಗ್ರಹ ಮಾತಡಿದರೆ, ತಂದೆ-ತಾಯಿ ಮಾತನಾಡುವ ದೇವರು. ತಂದೆ-ತಾಯಿಯ ಆಶೀರ್ವಾದ ಇಲ್ಲದಿದ್ದರೆ ಎಷ್ಟು ದೇವರಿಗೆ ಕೈ ಮುಗಿದರೂ ಪ್ರಯೋಜನವಿಲ್ಲ. ಕಿಲ್ಲೆ ಮೈದಾನದಲ್ಲಿ ಕಾರಣೀಕದ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವುದರಿಂದ ಎಲ್ಲರಿಗೂ ಒಳಿತಾಗುತ್ತದೆ ಎಂದರು.


ಕೋರ್ಟ್ ರಸ್ತೆಯ ವಿಶ್ವ ಸಂಕೀರ್ಣದಿಂದ ಶ್ರೀ ಮಹಾಗಣಪತಿಯ ಭವ್ಯ ಮೂರ್ತಿಯ ಶೋಭಾಯಾತ್ರೆ ನಡೆಯಿತು. ಕಿಲ್ಲೆ ಮೈದಾನದ ವೈಭವದ ಮಂಟಪದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆರಾಧಿಸಲಾಯಿತು.
ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಹಿರಿಯರಾದ ಕಿಟ್ಟಣ್ಣ ಗೌಡ, ದೇವತಾ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ, ಪ್ರಮುಖರಾದ ನ್ಯಾಯವಾದಿ ಚಿದಾನಂದ ಬೈಲಾಡಿ, ಸುದೇಶ್ ಚಿಕ್ಕಪುತ್ತೂರು,ಡಾ. ರಾಜೇಶ್ ಬೆಜ್ಜಂಗಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Star Of Kudla

Learn More →

Leave a Reply

Your email address will not be published. Required fields are marked *