ನಿವೃತ್ತ ತಹಶೀಲ್ದಾರ್ ಹಾಗೂ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶತಾಯುಷಿ ಬಿ.ಎಸ್. ಕುಲಾಲ್ ನಿಧನ

ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾಗಿದ್ದ, ನಿವೃತ್ತ ತಹಶೀಲ್ದಾ‌ರ್, ಶತಾಯುಷಿ ಬಿ.ಎಸ್. ಕುಲಾಲ್‌ ಅವರು ಆ.30ರಂದು ನಿಧನರಾದರು. ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾಗಿ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಅವರು, ಸಾರ್ವಜನಿಕ ಹಾಗೂ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ್ದರು. ನಿಧನರಾದ ಶತಾಯುಷಿ, ನಿವೃತ್ತ ತಹಶೀಲ್ದಾರ್

ಹಾಗೂ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಬಿ.ಎಸ್. ಕುಲಾಲ್ ಅವರ ಅಂತಿಮ ಸಾರ್ವಜನಿಕ ದರ್ಶನಕ್ಕೆ ಆ.30ರಂದು ಮಧ್ಯಾಹ್ನ 2.30ರಿಂದ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದಲ್ಲಿ ಅವಕಾಶ ಕಲ್ಪಿಸಲಾಗಿದೆ. ಬಿ.ಎಸ್‌. ಕುಲಾಲ್ ಅವರ ಅಂತ್ಯಕ್ರಿಯೆ ಆ.30ರಂದು ಸಂಜೆ ಪುತ್ತೂರು ಸ್ಮಶಾನದಲ್ಲಿ ನಡೆಯಲಿದೆ. ಅಂತ್ಯಕ್ರಿಯೆಗೂ ಮುನ್ನ ಸಂಘದ ಆವರಣದಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಬಹುದಾಗಿದೆ ಎಂದು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕ‌ರ್ ಪೆರುವಾಯಿ ತಿಳಿಸಿದ್ದಾರೆ.

ಮೃತರು ಇಬ್ಬರು ಪುತ್ರರು, ಪುತ್ರಿ, ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

News Editor

Learn More →

Leave a Reply

Your email address will not be published. Required fields are marked *