ಉಳ್ಳಾಲದಲ್ಲಿ ಅಪ್ರಾಪ್ತೆ ಮೇಲೆ ಮಲತಂದೆಯೇ ನಿರಂತರ ಅತ್ಯಾಚಾರ: ಆರೋಪಿಗೆ ಪೋಕ್ಸೊ ಕಾಯ್ದೆ ಅಡಿ ಬಂಧನ

ಉಳ್ಳಾಲ : ಮಲತಂದೆಯೇ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಉಳ್ಳಾಲ ಪೊಲೀಸರು ಪೋಕ್ಸೊ ಪ್ರಕರಣದಡಿ ಬಂಧಿಸಿದ್ದಾರೆ.

ಈ ನೀಚಕೃತ್ಯ ಎಸಗಿದ ಆರೋಪಿ ಅಮೀರ್ (40)ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಅಮೀರ್ ಎಂಬ ಕಾಮುಕ ಬಾಲಕಿ ಏಳು ವರ್ಷದವಳಿದ್ದಾಗ ಅತ್ಯಾಚಾರ ಎಸಗಲು ಆರಂಭಿಸಿದ್ದಾನೆ. ಇದೀಗ 12ರ ಹರೆಯದವಳಾಗಿದ್ದು, ನಿರಂತರ ಅತ್ಯಾಚಾರ ಎಸಗುತ್ತಲೇ ಬಂದಿದ್ದನು. ಮನೆ ಮಂದಿ ಮರ್ಯಾದೆಗೆ ಹೆದರಿ ದೂರು ದಾಖಲಿಸದೇ ಇದ್ದರು.

ತದನಂತರ ಅ.18ರಂದು ಮಾನಸಿಕವಾಗಿ ನೊಂದಿದ್ದ ಬಾಲಕಿಯನ್ನು ಆಸ್ಪತ್ರೆಗೆ ಹೆತ್ತವರು ಕೊಂಡೊಯ್ದಾಗ ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Star Of Kudla

Learn More →

Leave a Reply

Your email address will not be published. Required fields are marked *